ದೇವರಹಳ್ಳಿ: ಗಣೇಶೋತ್ಸವ ಸಮಿತಿ ರಚನೆ

(ನ್ಯೂಸ್ ಕಡಬ) newskadaba.comಕಡಬ, ಆಗಸ್ಟ್.19.ಕಡಬ ತಾಲೂಕು ಯೇನೆಕಲ್ಲು ಗ್ರಾಮದ ದೇವರಹಳ್ಳಿಯಲ್ಲಿ 23 ನೇ ವರ್ಷದ ಗಣೇಶೋತ್ಸವವನ್ನು ಆಚರಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಯಿತು.

ದೇವರಹಳ್ಳಿಯ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ, ಸಮಿತಿಯ ಅಧ್ಯಕ್ಷರಾಗಿ ಮಿಥುನ್ ಮಾಣಿಬೈಲು, ಕಾರ್ಯದರ್ಶಿಯಾಗಿ ಹರ್ಷಿತ್ ಉಪ್ಪಳಿಕೆ, ಖಜಾಂಜಿಯಾಗಿ ಹರ್ಷಿತ್ ಆಚಾರ್ಯ ಕಲ್ಲಾಜೆ ಆಯ್ಕೆಯಾದರು. ನಂತರ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಶೆಗಳನ್ನು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಸಂತ ಗೌಡ ಕುಜುಂಬಾರು, ಮಹೇಶ್ ಎಂ.ಪಿ ಮಾಣಿಬೈಲು, ಯಶೋಧರ ಮಾಣಿಬೈಲು, ಶ್ರೀಕುಮಾರ ಭಟ್ ಅಲೆಪ್ಪಾಡಿ, ತೀರ್ಥರಾಮ ಮಾಣಿಬೈಲು, ಪ್ರವೀಣ್ ಮಾಣಿಬೈಲು, ಮನೀಷ್ ಪದೇಲ, ಅಜಿತ್ ಪಿಂಡಿಮನೆ, ಉಲ್ಲಾಸ್ ಕೇದಿಗೆಬನ, ದಿಲೀಪ್ ಉಪ್ಪಳಿಕೆ, ಹರ್ಷಿತ್ ಕಲ್ಲಾಜೆ, ಸುರೇಶ್ ಎರಕ್ಕಳ, ಶ್ರೀಕಾಂತ್ ಕುಜುಂಬಾರು, ಜೀವನ್ ಹೊಪ್ಪಾಳೆ, ಹೇಮಂತ್ ಮಾಣಿಬೈಲು, ಕಾರ್ತಿಕ್ ಕುಜುಂಬಾರು, ನವೀಶ್ ಮಾಣಿಬೈಲು, ದುಷ್ಯಂತ್ ಪದೇಲ, ಉದಯ ಕುಜುಂಬಾರು ಮತ್ತಿತರರು ಉಪಸ್ಥಿತರಿದ್ದರು.

Also Read  ಕುಕ್ಕೆಗೂ ತಟ್ಟಿದ ಕೋರೊನಾ ಬಿಸಿ ➤ ದೇವಾಲಯಗಳ ಆದಾಯದಲ್ಲಿ ಭಾರೀ ಇಳಿಕೆ

error: Content is protected !!
Scroll to Top