ನೇತ್ರಾವತಿ ಸೇತುವೆಯ ಬಳಿ ನಿಗೂಢವಾಗಿ ನಾಪತ್ತೆಯಾದ ಕಡಬದ ಯುವಕ ➤ ಶೋಧ ಕಾರ್ಯ ಮುಂದುವರಿಕೆ

ಕಡಬ: ಮಂಗಳೂರಿನ ಉಳ್ಳಾಲ ಸೇತುವೆ ಬಳಿ ಬೈಕ್ ನಿಲ್ಲಿಸಿ ಆ.16 ರಾತ್ರಿಯಿಂದ ನಾಪತ್ತೆಯಾಗಿರುವ ನೂಜಿಬಾಳ್ತಿಲದ ಯುವಕನ ಸುಳಿವು ಇನ್ನೂ ಲಭ್ಯವಾಗಿಲ್ಲ, ಆ.18ರಂದು ದಿನವಿಡಿ ಬೋಟ್ ಮೂಲಕ ಹುಡುಕಾಟ ನಡೆಸಲಾಗುತ್ತಿದ್ದು ಅಲ್ಲದೆ ಮೀನುಗಾರರು ಕೂಡ ಹುಡುಕಾಟ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ನೂಜಿಬಾಳ್ತಿಲ ಗ್ರಾಮದ ಕೊಡೆಂಕಿರಿ ದಾಮೋಧರ ಗೌಡ ಎಂಬವರ ಪುತ್ರ ಸದಾಶಿವ(28ವ.) ಎಂಬವರು ನಾಪತ್ತೆಯಾದವರು, ಇವರು ಮಂಗಳೂರಿನಲ್ಲಿ ರೈಲ್ವೇ ವಾಟರ್ ಹಾವರ್ೆಸ್ಟಿಂಗ್ ಸಿಸ್ಟಮ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಆ.16ರಂದು ರಾತ್ರಿಯಿಂದ ನಾಪತ್ತೆಯಾಗಿದ್ದು ಬೈಕ್ ಉಳ್ಳಾಲ ಸೇತುವೆ ಬಳಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸದಾಶಿವ ಅವರ ಅಣ್ಣ ದಿನೇಶ್ ಎಂಬವರು ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸದಾಶಿವ ಅವರು ಬೈಕನ್ನು ಉಳ್ಳಾಲ ಸೇತುವೆ ಬಳಿ ನಿಲ್ಲಿಸಿರುವುದರಿಂದ ಅವರು ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಲವಾದ ಸಂಶಯದಿಂದ ಕಳೆದ ಎರಡು ದಿನಗಳಿಂದ ನದಿ ನೀರಿನಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಆ.18ರಂದು 4 ಬೋಟ್ ಹಾಗೂ ಪ್ರತ್ಯೇಕವಾಗಿ ಅಲ್ಲಿನ ಮೀನುಗಾರರು ಕೂಡ ತಮ್ಮ ಕೆಲಸದ ಜತೆಗೆ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Also Read  ಮಂಗಳೂರು: ನಾಳೆ (ಜೂ. 21) ರೆಡ್ ಕ್ರಾಸ್ ವತಿಯಿಂದ ಯೋಗ ದಿನಾಚರಣೆ

ಸುಮಾರು ಎಂಟು ಮಂದಿ ಕಡಬ ಭಾಗದ ಮಿತ್ರರೊಂದಿಗೆ ಮಂಗಳೂರಿನ ಪಡೀಲ್ ಎಂಬಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಸದಾಶಿವ ಅವರು ನಾಪತ್ತೆಯಾಗಿರುವ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಅವರ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಮೂಲಗಳ ಪ್ರಕಾರ ಯಾರೇ ವ್ಯಕ್ತಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೂ ಸಾಧಾರಣ 24 ಗಂಟೆ ಆಸುಪಾಸಿನಲ್ಲಿ ಅವರ ಶವ ಪತ್ತೆಯಾಗುತ್ತದೆ, ಆದರೆ ಸದಾಶಿವರು ಒಂದು ವೇಳೆ ನದಿ ನೀರಿಗೆ ಧುಮುಕ್ಕಿದ್ದರೂ ಇದೀಗ 2 ದಿನ ಕಳೆದರೂ ಪತ್ತೆಯಾಗದಿರುವ ಬಗ್ಗೆ ಅವರ ಕುಟುಂಬದವರಲ್ಲಿ ಆತಂಕ ವ್ಯಕ್ತವಾಗಿದೆ.

ಸದಾಶಿವರ ಸಹೋದರನಿಂದ ತನಿಖೆಗೆ ಆಗ್ರಹ
ಈ ಮಧ್ಯೆ ನಾಪತ್ತೆಯಾಗಿರುವ ಸದಾಶಿವ ಅವರ ಸಹೋಧರ ದಿನೇಶ್ ಅವರು ಸಹೋದರನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ. ನನ್ನ ಸಹೋದರ ನಾಪತ್ತೆಯಾಗಿರುವುದು ಬಹಳ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ, ಈ ಬಗ್ಗೆ ಪೋಲಿಸರಿಂದಲೇ ಸಮಗ್ರ ತನಿಖೆ ನಡೆದರೆ ಮಾತ್ರ ಸತ್ಯ ಗೊತ್ತಾಗಬಹುದು, ಈ ಬಗ್ಗೆ ಆ.19ರಂದು ಪೋಲಿಸರೊಂದಿಗೆ ಮಾತುಕತೆ ನಡೆಸಲಾಗುವುದು, ಏನಾದರೂ ನಮಗೆ ಕಾರಣ ಗೊತ್ತಾಗಬೇಕು, ಸದಾಶಿವ ಅವರಿಗೆ ಆಥರ್ಿಕ ಸಮಸ್ಯೆ ಇರಲಿಲ್ಲ, ಬೇರೆ ಏನಾದರೂ ಸಮಸ್ಯೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ, ಒಂದು ವೇಳೆ ನದಿ ನೀರಿಗೆ ಹಾರಿದ್ದರೂ 2 ದಿನ ದಿನ ಕಳೆದರೂ ಪತ್ತೆಯಾಗದಿರುವುದು ನಮ್ಮನ್ನು ಚಿಂತೆಗೀಡು ಮಾಡಿದೆ, ಏನಿದ್ದರೂ ನಮಗೆ ಸತ್ಯ ಗೊತ್ತಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Also Read  marsbahis Casino nedir | Bonuslari Bahis

ತನಿಖೆ ಪ್ರಗತಿಯಲ್ಲಿದೆ-ಅಶೋಕ್ ಎಸ್.ಐ. ಕಂಕನಾಡಿ
ಈ ಬಗ್ಗೆ ಕಂಕನಾಡಿ ನಗರ ಠಾಣೆಯ ಎಸ್.ಐ ಅಶೋಕ್ ಅವರು ಪ್ರತಿಕ್ರಿಯೆ ನೀಡಿ, ಸದಾಶಿವ ಅವರ ನಾಪತ್ತೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದೆವೆ, ಅವರ ಪೋನ್ ಕಾಲ್ಗಳ ಬಗ್ಗೆ ತನಿಖೆ ನಡೆಸುತ್ತಿದ್ದೆವೆ, ನಾಪತ್ತೆ ಪ್ರಕರಣವನ್ನು ಭೇದಿಸಲು ಎಲ್ಲ ರೀತಿಯ ತನಿಖೆಯನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

error: Content is protected !!
Scroll to Top