ಆವರಣ ಗೋಡೆ ಉದ್ಘಾಟನೆ, ಸಮ್ಮಾನ

(ನ್ಯೂಸ್ ಕಡಬ) newskadaba.com ರೆಂಜಿಲಾಡಿ, ಆಗಸ್ಟ್.19.ಗೋಳಿಯಡ್ಕ ರೆಂಜಿಲಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರೋತ್ಸವ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಿತು.


ಧ್ವಜಾರೋಹಣವನ್ನು ದಾನಿಗಳೂ, ವಕೀಲರೂ ಆದ ವರ್ಗೀಸ್ ಈಶೋ ಅವರು ನೆರವೇರಿಸಿದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಶಾಲಾ ಆವರಣಗೋಡೆಯನ್ನು ಉದ್ಘಾಟಿಸಿದರು. ನೂಜಿಬಾಳ್ತಿಲ ಗ್ರಾ.ಪಂ. ಅನುದಾನದಲ್ಲಿ ನಿರ್ಮಾಣವಾಗಲಿರುವ ಮಳೆನೀರು ಕೊಯ್ಲು ಘಟಕಕ್ಕೆ ತಾ.ಪಂ. ಸದಸ್ಯ ಗಣೇಶ್ ಕೈಕುರೆ ಶಂಕು ಸ್ಥಾಪನೆ ನೆರವೇರಿಸಿದರು. ಮುಖ್ಯ ಶಿಕ್ಷಕ ಮೇದಪ್ಪ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುವರ್ಣಲತಾ ಸ್ವಾಗತಿಸಿ, ವಸಂತಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬೇಬಿ ಕಾರ್ಯಕ್ರಮ ನಿರೂಪಿಸಿದರು.

Also Read  ಸೈನಿಕನೋರ್ವನ ನಗದು ಹಣದ ಬ್ಯಾಗ ಕಳ್ಳತನ: ಆರೋಪಿ ಅರೆಸ್ಟ್..!

ಸಮ್ಮಾನ:
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ, ಸದಸ್ಯರಾದ ರಾಜು ಗೋಳಿಯಡ್ಕ, ಪುಷ್ಪಲತಾ, ಪಿಡಿಒ ಆನಂದ ಎ., ರವರನ್ನು ರೆಂಜಿಲಾಡಿ ಶಾಲಾ ವತಿಯಿಂದ ನಿವೃತ್ತ ಶಿಕ್ಷಕ ಬಾಲಕೃಷ್ಣ ರೈ ಹಾಗೂ ನೂಜಿಬಾಳ್ತಿಲ ಸಿ.ಆರ್.ಪಿ. ಗೋವಿಂದ ನಾಯ್ಕ್ ಸಮ್ಮಾನಿಸಿ, ಗೌರವಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ನೆಬಿಷಾ, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top