ಜಾಕ್ವೆಲ್ ಶುಚಿ ಕಾರ್ಯ ನೀರು ಪೂರೈಕೆ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ LLPS-1 18 MGD ರೇಚಕ ಸ್ಥಾವರದ ಜಾಕ್ವೆಲ್ ನ ಶುಚಿ ಕಾರ್ಯ ನಡೆಯುತಿದ್ದು  ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಜಾಕ್‍ವೆಲ್‍ನಲ್ಲಿ ಮರಳು ಕಸಕಡ್ಡಿಗಳು ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು ಜಾಕ್‍ವೆಲ್‍ನ್ನು ಶುಚಿಗೊಳಿಸಲು ಆಗಸ್ಟ್ 20 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದೆ. ಸದ್ರಿ ಅವಧಿಯಲ್ಲಿ ಬೆಂದೂರು ರೇಚಕ ಸ್ಥಾವರದಿಂದ ನೀರು ಸರಬರಾಜು ಆಗುವ ಮಂಗಳೂರು ನಗರ ಭಾಗಶಃ ಪ್ರದೇಶ, ಕಾರ್‍ಸ್ಟ್ರೀಟ್, ಮೇರಿಹಿಲ್, ಸುರತ್ಕಲ್, ಕೋಡಿಕಲ್ ಭಾಗಶಃ, ಸಸಿಹಿತ್ಲು, ಮುಕ್ಕಾ, ಪಣಂಬೂರು, ಕಾವೂರು, ಕೂಳೂರು ಭಾಗಶಃ, ಕಾಟಿಪಳ್ಳ ಇತ್ಯಾದಿ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರರು ಮಹಾನಗರ ಪಾಲಿಕೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಉಡುಪಿ: ಇಬ್ಬರು ಪುತ್ರಿಯರಿಗೆ ಲೈಂಗಿಕ ಹಲ್ಲೆ ಪ್ರಕರಣ ➤ ತಂದೆಗೆ ಜೀವಾವಧಿ ಜೈಲು ಶಿಕ್ಷೆ

error: Content is protected !!
Scroll to Top