ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ➤ ಶೇಕಡಾ 2% ಸೇವಾ ಶುಲ್ಕದ ಆಧಾರದ ದರದಲ್ಲಿ ಸಾಲ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಇವರ ವತಿಯಿಂದ ಆರ್ಥಿಕವಾಗಿ ಬಡ ಹಿಂದುಳಿದ ಮುಸ್ಲಿಂ, ಕ್ರಿಶ್ಚಿಯನ್ಸ್, ಜೈನ್ಸ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗುವುದು.

ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿ.ಬಿ.ಎಮ್, ಡಿಪ್ಲೋಮಾ, ಎಂ.ಬಿ.ಎ, ಎಂ.ಕಾಂ. ,ಬಿ.ಇ, ಎಂ.ಬಿ.ಬಿ.ಎಸ್, ಎಂ.ಡಿ.ಎಸ್, ಎಂ.ಟೆಕ್, ಎಂ.ಡಿ. ಎಂ.ಸಿ.ಎ. ಐ.ಟಿ.ಐ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಫ್ಯಾಶನ್ ಡಿಸೈನ್ ಮತ್ತು ಸಿ.ಎ ಹೊರತುಪಡಿಸಿ) ಪ್ರತಿ ವರ್ಷ ರೂ. 10000 ರಿಂದ 75000 ರೂಪಾಯಿವರೆಗೆ ಶೇ 2% ರ ಸೇವಾ ಶುಲ್ಕದ ಆಧಾರದ ದರದಲ್ಲಿ ಸಾಲವನ್ನು ಸರಕಾರದಿಂದ ಪ್ರಾಚಾರ್ಯರ ಖಾತೆಗೆ ನೇರವಾಗಿ ಜಮೆ ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸುವ ಅವಕಾಶವಿರುತ್ತದೆ.

Also Read  ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತ್ಯು..!!

ನಿಗಮದ ವೆಬ್‍ಸೈಟ್ kmdc.kar.nic.in/arivu2 ನಲ್ಲಿ Non-CET  ಯಲ್ಲಿ ಆನ್‍ಲೈನ್ ಅರ್ಜಿಗಳನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಹಾಗೂ ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಮೌಲಾನ ಆಝಾದ್ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು – 575001 ಮತ್ತು ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಜಿಲ್ಲಾ ವ್ಯವಸ್ಥಾಪಕರ ಕಛೇರಿ, “ರಜತಾದ್ರಿ” ಜಿಲ್ಲಾಧಿಕಾರಿಗಳ ಸಂಕೀರ್ಣ, ಎ ಬ್ಲಾಕ್, 1ನೇ ಮಹಡಿ, ಕೊಠಡಿ ಸಂಖ್ಯೆ ಎ207, ಮಣಿಪಾಲ ಉಡುಪಿ ತಾಲೂಕು, ಉಡುಪಿ ಜಿಲ್ಲೆ-576104 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಇವರ ಪ್ರಕಟಣೆ ತಿಳಿಸಿದೆ.

Also Read  ನಟ ದರ್ಶನ್ ಜಾಮೀನು ಅರ್ಜಿ: ನಾಳೆ ತೀರ್ಪು ಪ್ರಕಟ

error: Content is protected !!
Scroll to Top