(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ರಾಷ್ಟ್ರೀಯ ವಿಪತ್ತು ನಿರ್ವಹಣಾ ತರಬೇತಿ ಸಂಸ್ಥೆ ನಾಗ್ಪುರ ಇಲ್ಲಿ ವಿಪತ್ತು ನಿರ್ವಹಣೆ ಕುರಿತು ಆಗಸ್ಟ್ 13 ರಿಂದ ಆಗಸ್ಟ್ 16 ರವರೆಗೆ 3 ದಿನಗಳ ವಿಶೇಷ ತರಬೇತಿ ನಡೆಯಿತು.
ಈ ತರಬೇತಿಗೆ ಕರ್ನಾಟಕ ರಾಜ್ಯದ ಪ್ರತಿನಿಧಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ತರಬೇತಿ ನೀಡಿದ್ದಾರೆ. ಗೃಹರಕ್ಷಕ, ಅಗ್ನಿಶಾಮಕ, ಪೌರ ರಕ್ಷಣಾ ಪಡೆ ಮತ್ತು ಪೊಲೀಸರಿಗಾಗಿ ಈ ತರಬೇತಿ ಶಿಬಿರ ಆಯೋಜಿಸಲಾಗಿದ್ದು ದೇಶದಾದ್ಯಂತ 20 ಮಂದಿ ಈ ತರಬೇತಿಯಲ್ಲಿ ಭಾಗವಹಿಸಿದ್ದರು.