ಮಂಗಳೂರು ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆ ➤ ಡೆಂಗ್ಯೂ ನಿಯಂತ್ರಣ ಹಾಗೂ ಮುಂಜಾಗೃತಾ ಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.17.  ಸತತವಾಗಿ 20 ದಿನಗಳಿಂದ ಡೆಂಗ್ಯೂ ನಿಯಂತ್ರಣಕ್ಕಾಗಿ, ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಿ ಜನಜಾಗೃತಿ ಮತ್ತು ಚರಂಡಿಗಳ ಸ್ವಚ್ಚತೆಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾರಸಿ, ಹೂಕುಂಡಗಳು ಹಾಗೂ ಇತರ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಸಾರ್ವಜನಿಕರಲ್ಲಿ ತಿಳಿಸಲಾಗಿದೆ. ಅಗತ್ಯವಿರುವ ಸ್ಥಳಗಳಲ್ಲಿ ಫಾಗಿಂಗ್ ಕೂಡ ಮಾಡಲಾಗುತ್ತಿದೆ.

ಆದರೂ ಕೂಡ ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸದೆ, ತಮ್ಮ ಮನೆಗಳಲ್ಲಿಯೇ ಇರುವ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಗಮನ ಹರಿಸದೆ ತಮ್ಮ ಕುಟುಂಬದವರಿಗೆ ಹಾಗೂ ನೆರೆಹೊರೆಯವರಿಗೆ ಮತ್ತೆ ಮತ್ತೆ ಡೆಂಗ್ಯೂಜ್ವರ ಹರಡಲು ಕಾರಣವಾಗುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.

Also Read  ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ ಗೆ ಸೇರ್ಪಡೆ

ಆದ ಕಾರಣಮಂಗಳೂರು ಮಹಾನಗರಪಾಲಿಕೆ ಹಾಗೂ ಆರೋಗ್ಯಇಲಾಖೆಯ ವತಿಯಿಂದ ಪ್ರತಿ ಮನೆ, ಅಂಗಡಿ, ಅಪಾರ್ಟ್‍ಮೆಂಟ್‍ಗಳ ಸ್ಥಳ ಪರಿಶೀಲನಾ ಸಂದರ್ಭದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಮಂಗಳೂರು ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸೂಚನೆಯನ್ನು ಪಾಲಿಸದೆ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top