ರಕ್ಷಕ ಶಿಕ್ಷಕ ಸಂಘದ ಸಭೆ ➤ ಜನತಾ ಪ್ರೌಢಶಾಲೆ ಅಡ್ಯನಡ್ಕ

(ನ್ಯೂಸ್ ಕಡಬ) newskadaba.com ಅಡ್ಯನಡ್ಕ, ಆಗಸ್ಟ್.17.  ಈ ಶಾಲೆಯ ರಕ್ಷಕ ಶಿಕ್ಷಕ ಸಭೆಯು ಆ. 16ರಂದು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಂಗಣದಲ್ಲಿ ಜರುಗಿತು.
ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿಗಳಾದ ರಮೇಶ್ ಎಂ. ಬಾಯಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಹೆಚ್ಚಿನ ಮುತುವರ್ಜಿಯಿಂದಪ್ರೋತ್ಸಾಹ ನೀಡಬೇಕೆಂದು ಸಲಹೆಯಿತ್ತರು.

ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪಾಲಕರಿಗೆ ಸಲಹೆ-ಸೂಚನೆಗಳನ್ನು ನೀಡಿದರು. ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿದರು.ಹಿರಿಯ ಶಿಕ್ಷಕರಾದ ಎಸ್. ರಾಜಗೋಪಾಲ ಜೋಶಿ ಕಾರ್ಯಕ್ರಮ ನಿರೂಪಿಸಿ, ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ವಂದಿಸಿದರು.

Also Read  ಮೂಡುಬಿದಿರೆ :ಪಾಳು ಬಿದ್ದ ಕಟ್ಟಡದಲ್ಲಿ ನೇಣಿಗೆ ಶರಣಾದ ಯುವಕ

error: Content is protected !!
Scroll to Top