ಇಬ್ಬನಿ ಸುಳ್ಯ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ➤ ಜನಜಾಗೃತಿ ಅಭಿಯಾನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.17.ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ಖಾಯಿಲೆ ಬಗ್ಗೆ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಸುಳ್ಯದ ಮಾನ್ಯ ತಹಶೀಲ್ದಾರರಾದ ಕುಞ ಅಹ್ಮದ್ ಅವರು ಕರ ಪತ್ರ ಬಿಡುಗಡೆ ಮಾಡುವ ಮುಖಾಂತರ ಚಾಲನೆ ನೀಡಿದರು. ಅಭಿಯಾನದ ಮೊದಲ ಭಾಗವಾಗಿ ಕೊಡಿಯಾಲಬೈಲು ಕಾಲನಿಗೆ ಬೇಟಿ ನೀಡಿ ಮನೆಮನೆಗಳಿಗೆ ಕರಪತ್ರ ನೀಡಿ ಮಾಹಿತಿ ನೀಡಿದರು.

ನಂತರ ಸರಕಾರಿ ಕಿರಿಯ ಪಾಥಮಿಕ ಶಾಲೆ ಕೊಡಿಯಾಲಬೈಲು ಇಲ್ಲಿಗೆ ಬೇಟಿ ನೀಡಿ ಡೆಂಗೆ ತಡೆಗಟ್ಟುವ ಬಗ್ಗೆ ಪ್ರಾತ್ಯಕ್ಷತೆ ಮಾಡಿ ತೋರಿಸಿ ಮಾಹಿತಿ ಕರಪತ್ರ ನೀಡಲಾಯಿತು. ಆ ಬಳಿಕ ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಡ ಶಾಲೆ ಕೊಡಿಯಾಲಬೈಲು ಶಾಲೆಗೆ ಬೇಟಿ ನೀಡಿ ಕರ ಪತ್ರ ನೀಡಲಾಯಿತು. ನಂತರ ಜಟ್ಟಿಪಳ್ಳದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕರಪತ್ರ ನೀಡಲಾಗಿದೆ.

Also Read  'ಇಂಡಿಯಾ'ಮೈತ್ರಿಕೂಟದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ನೇಮಕ ಫಿಕ್ಸ್

ಈ ಸಂಧರ್ಭದಲ್ಲಿ ಇಬ್ಬನಿ ಅಧ್ಯಕ್ಷ ಖಾದರ್, ಜಟ್ಟಿಪಳ್ಳ ಸಿಟಿ ಫ್ರೆಂಡ್ಸ್ ಸ್ಪೋಟ್ರ್ಸ್ ಆಂಡ್ ಆಟ್ರ್ಸ್ ಕ್ಲಬ್ ಜಟ್ಟಿಪಳ್ಳ ಅಧ್ಯಕ್ಷ ನಾಸಿರ್, ಸಿ.ಎ ಸಿ.ಎಫ್ ಸಿ ಸಾಮಾಜಿಕ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೆ.ಎ ಸಂಘಟನಾ ಕಾರ್ಯದರ್ಶಿ ಶಿಹಾಬ್ ಜೆ.ಎಂ , ಇಬ್ಬನಿ ಸುಳ್ಯ, ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಹಾಗೂ ಸಿ.ಎಫ್.ಸಿ ಪಧಾಧಿಕಾರಿಗಳಾದ ಸತ್ಯನಾರಾಯಣ, ಫವಾಝ್ ಎನ್ ಎ , ಹಜರತ್ ಖಲೀಲ್, ರಿಯಾಜ್ ಸಿ.ಎ, ಅಲ್ತಾಫ್ ಜಟ್ಟಿಪಳ್ಳ, ಶಾನವಾಸ್ ಶೇಖ್ ಜ್ಯೋತಿ, ನಾಸಿರ್ ಪೈಚಾರ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top