ಉಪ್ಪಿನಂಗಡಿಯಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆಗಸ್ಟ್.16.ಉಪ್ಪಿನಂಗಡಿ ಶಾಲಾ ರಸ್ತೆಯಲ್ಲಿರುವ ಆರ್‌. ಕೆ ಜ್ಯುವೆಲ್ಲರಿ ಶಾಪ್ ಗೆ  ತಡರಾತ್ರಿ ಕಳ್ಳರು ನುಗ್ಗಿದ್ದು ಜ್ಯುವೆಲ್ಲರಿಯಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ದೋಚಲಾಗಿದೆ.

ಕಳ್ಳರು ಗ್ಯಾಸ್‌ ಕಟ್ಟರ್‌ ಬಳಸಿ, ಅಂಗಡಿಯ ಶಟರ್‌ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಆದರೆ ಒಳಗಿದ್ದ ಲಾಕರ್ ರೂಮ್‌ ದೋಚಿಲ್ಲ.ಈ ಜ್ಯುವೆಲ್ಲರಿಗೆ ಒಬ್ಬ ಕಾವಲುಗಾರನಿದ್ದು, ಉಪ್ಪಿನಂಗಡಿ ಪೇಟೆಗೂ ಆತನೆ ಕಾವಲುಗಾರನಾಗಿದ್ದಾನೆ. ಆತ ರಾತ್ರಿ 1 ರಿಂದ 3 ಗಂಟೆಯವರೆಗೆ ಪೇಟೆಯ ರೌಂಡ್ಸ್‌ ಗೆ ಹೋಗುತ್ತಾನೆ. ಆ ವೇಳೆಯಲ್ಲಿ ದರೋಡೆಕೋರರು ಈ ಕೃತ್ಯವೆಸಗಿದ್ದಾರೆ. ಮೂರು ಗಂಟೆಯ ನಂತರ ಆತ ಮರಳಿ ಬಂದಾಗ ದರೋಡೆಯ ವಿಚಾರ ತಿಳಿದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ  ಆಗಮಿಸಿ ಪರಿಶೀಲನೆ ನಡೆಸಿದರು.

Also Read  ವೈವಿಧ್ಯಮಯ ಅಲಂಕಾರಗಳಿಂದ ಕಂಗೊಳಿಸುತ್ತಿರುವ 'ಮಂಗಳೂರು ದಸರಾ'

error: Content is protected !!
Scroll to Top