ಆತೂರು: ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ವಲಯದ ಫ್ರೀಡಂ ಸ್ಕ್ವಾರ್ ವತಿಯಿಂದ ➤73ನೇ ಸ್ವಾತಂತ್ರ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಆತೂರು, ಆಗಸ್ಟ್.15.ಬದ್ರಿಯ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಬದ್ರಿಯಾ ಮಸೀದಿಯ ಜಮಾಅತ್ ಅಧ್ಯಕ್ಷರಾದ ಜ| ಅಬ್ದುಲ್ ರಝಾಕ್ ಬಿ. ಕೆ ಇವರ ಧ್ವಜಾರೋಹಣ ಮಾಡಿದರು.

ಆತೂರು ತದ್ಬೀರುಲ್ ಇಸ್ಲಾಂ ಮದರಸದ ಅಬ್ದುಲ್ ಸಮದ್ ಅನ್ಸಾರಿ ಸ್ವಾಗತಸಿದರು. ಕಾರ್ಯಕ್ರಮದಲ್ಲಿ ಆತೂರು ಬದ್ರಿಯಾ ಮಸೀದಿಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಿರಾಜ್, ಉಪಾಧ್ಯಕ್ಷರು ಅಜೀಜ್, ಸದಸ್ಯರು ಕಾಸಿಮ್, ಗ್ರಾಮ ಫಂಚಾಯತ್ ಸದಸ್ಯರು ಕೆ ಎ ಸುಲೈಮಾನ್, ಎಸ್.ಕೆ.ಎಸ್.ಎಸ್.ಎಫ್ ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ, ತದ್ಬೀರುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳು, ರಕ್ಷಕರೂ, ಮಿಸ್ಬಾಹುಲ್ ಹುದಾ ಸಾಹಿತ್ಯ ಸಮಾಜ ಆತೂರು ಇದರ ಪದಾಧಿಕರಿಗಳು, ಶಂಸುಲ್ ಉಲಮ ಕ್ರಿಯಾ ಸಮಿತಿಯ ಇದರ ಪದಾಧಿಕರಿಗಳು ಹಾಜರಿದ್ದರು.

Also Read  ➤ ಅರಣ್ಯ ಇಲಾಖೆಯ ನರ್ಸರಿಗೆ ಎಂಟ್ರಿ ಕೊಟ್ಟ ಕಾಡಾನೆಗಳು

error: Content is protected !!
Scroll to Top