ಆಗಸ್ಟ್ 23 ರಂದು ನಿವೃತ್ತ ಸರಕಾರಿ ನೌಕರರ ಪಿಂಚಣಿ ಅದಾಲತ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.15.ನಿವೃತ್ತ ನೌಕರರ ಪಿಂಚಣಿ ಕುಂದು ಕೊರತೆಗಳ ಅಹವಾಲಿನ ಬಗ್ಗೆ ಪಿಂಚಣಿ ಅದಾಲತ್ ಅನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಆಗಸ್ಟ್ 23ರಂದು ನಡೆಸಲಾಗುವುದು.

ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಸಮಸ್ಯೆಗಳಿದ್ದಲ್ಲಿ ಆಗಸ್ಟ್ 23ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಪೆನ್ಸನ್ ಅಧಾಲತ್‍ನಲ್ಲಿ ಭಾಗವಹಿಸಿ ಪೆನ್ಸನ್ ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.ಈಗಾಗಲೇ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಿಂಚಣಿದಾರರ ಸಮಸ್ಯೆ ಇದ್ದಲ್ಲಿ ಸದ್ರಿ ಮಾಹಿತಿಯನ್ನು ಪಿಂಚಣಿ ಅದಾಲತ್‍ನಲ್ಲಿ ನೀಡಿ ಬಗೆಹರಿಸುವ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ. ಈ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅಧಿಕಾರಿ ವೃಂದದವರು ಹಾಗೂ ಬ್ಯಾಂಕಿನ ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರತಿನಿಧಿಗಳು ಸದ್ರಿ ಅದಾಲತ್‍ನಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ ಅರಂತೋಡು ಬಳಿ ಕಾರು ಢಿಕ್ಕಿ ➤ ಪಾದಚಾರಿ ಮೃತ್ಯು

error: Content is protected !!
Scroll to Top