ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದೊಂದಿಗೆ ➤ ವಿಶೇಷ ಉಪನ್ಯಾಸ ಮಾಲೆ ಕಾಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.15.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2007ರಿಂದ ವಿವಿಧ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ.

ಪ್ರಸಕ್ತ ವರ್ಷ “Basic principles and Applications of Geoinformatics” ವಿಷಯದ ಮೇಲೆ 2019 ರ ಆಗಸ್ಟ್ 27 ರಿಂದ 29ರವರೆಗೆ 3 ದಿನಗಳ ವಿಶೇಷ ಉಪನ್ಯಾಸ ಮಾಲೆ ಕಾರ್ಯಾಗಾರವನ್ನು ಇಸ್ರೋ ಸಂಸ್ಥೆಯ ಪ್ರಾದೇಶಿಕ ಕೇಂದ್ರವಾದ Regional Remote Sensing Center- south ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.ಈ ಕಾರ್ಯಾಗಾರದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ವಿಜ್ಞಾನ ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, Geoinformatics ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳನ್ನು ನುರಿತ ತಜ್ಞರಿಂದ ಏರ್ಪಡಿಸಲಾಗಿದೆ.

Also Read  ಕಡಬ: ಪಾಲುದಾರಿಕೆ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಿ ಪರಾರಿ ➤ ಹಣ, ಚಿನ್ನ ಕೊಟ್ಟು ಕೈ ಸುಟ್ಟುಕೊಂಡ ವಿವಿಧ ವ್ಯಾಪಾರಿಗಳು

ಇದರಿಂದ ವಿದ್ಯಾರ್ಥಿಗಳು Geoinformatics ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಆಧುನಿಕ ಸಂಶೋಧನೆಗಳ ಬಗ್ಗೆ ತಿಳಿಕೊಳ್ಳಲು ಸಹಕಾರಿಯಾಗುವುದು. ಈ ಕಾರ್ಯಾಗಾರದಲ್ಲಿ ಸ್ನಾತ್ತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ಉಪನ್ಯಾಸಕರು ಭಾಗವಹಿಸಲು ಆಗಸ್ಟ್ 20 ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ. ರಮೇಶ್ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top