ಶಿವಾಜಿನಗರದಲ್ಲಿ ಕೆಂಪು ಕಲ್ಲು ಹಾಸಿ ರಸ್ತೆ ದುರಸ್ತಿ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.14.ಮರ್ದಾಳದಿಂದ ಕರ್ಮಾಯಿ ರೈಲ್ವೆ ನಿಲ್ದಾಣಕ್ಕೆ ಹೋಗುವ ಜಿ.ಪಂ ರಸ್ತೆಯಲ್ಲಿ ಮರ್ದಾಳದಿಂದ ಮುಂದಕ್ಕೆ ಐತೂರು ಗ್ರಾ.ಪಂಗೆ ಒಳಪಟ್ಟ ಶಿವಾಜಿನಗರ ಎಂಬಲ್ಲಿ ಕೆಸರುಮಯವಾದ ರಸ್ತೆಗೆ ಕೆಂಪುಕಲ್ಲು ಹಾಸಿ ದುರಸ್ತಿಗೊಳಿಸಲಾಯಿತು.


ಕಳೆದೊಂದು ವಾರದಿಂದ ಸುರಿದ ವಿಪರೀತ ಮಳೆಯಿಂದ ರಸ್ತೆಯಲ್ಲೇ ಒಸರು ಬಂದು ಡಾಮರ್ ರಸ್ತೆ ಕುಸಿದು ರಸ್ತೆ ಕೆಸರುಮಯವಾಗಿದ್ದು ಯಾವುದೇ ವಾಹನಗಳು ಓಡಾಡದಂತೆ ತೊಂದರೆಯಾಗಿತ್ತು. ಐತೂರು ಗ್ರಾ.ಪಂ ಅಧ್ಯಕ್ಷ ಸತೀಶ್.ಕೆರವರು ಆಲಂಕಾರು ಶ್ರೀ ಲಕ್ಷ್ಮೀ ಪ್ರಸನ್ನರವರಿಂದ 1ಲೋಡ್ ಕೆಂಪುಕಲ್ಲು ತರಿಸಿ ಕೂಲಿಯಾಳುಗಳಿಂದ ರಸ್ತೆಯ ಕೆಸರು ಮಣ್ಣನ್ನು ತೆಗೆಯಿಸಿ ಕಲ್ಲು ಹಾಸಿ ರಸ್ತೆ ದುರಸ್ತಿಗೊಳಿಸಿದರು.

Also Read  ಕುಕ್ಕೆ ಸುಬ್ರಹ್ಮಣ್ಯ: ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಭೇಟಿ

ಜಿ.ಪಂ ಸಹಾಯಕ ಇಂಜಿನಿಯರ್ ಭರತ್‍ರವರು ಸ್ಥಳದಲ್ಲಿ ಉಪಸ್ಥಿತರಿದ್ದು ರಸ್ತೆ ದುರಸ್ತಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಪಿಎಮ್‍ಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಗುತ್ತಿಗೆದಾರ ಪ್ರಕಾಶ್ ಎನ್.ಕೆ, ಐತೂರು ಗ್ರಾ.ಪಂ ಕಾರ್ಯದರ್ಶಿ ರಮೇಶ್ ಅಚಾರ್ಯ, ಮರ್ದಾಳ ಗ್ರಾ.ಪಂ ಕಾರ್ಯದರ್ಶಿ ವೆಂಕಟರಮಣ, ಉಪಸ್ಥಿತರಿದ್ದರು. ಸ್ಥಳೀಯರಾದ ಉದಯ ಮರ್ದಾಳ, ಅನಿಲ್‍ಕುಮಾರ್, ರಶೀದ್ ಶಿವಾಜಿನಗರರವರು ರಸ್ತೆ ದುರಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಕರಿಸಿದರು.

error: Content is protected !!
Scroll to Top