ಮಾರ್ ಇವಾನಿಯೋಸ್ ಕಾಲೇಜು ಕುಂತೂರು ➤ ಮಾದಕ ವ್ಯಸನದ ಕುರಿತು ಜಾಗ್ರತಿ ಕಾರ್ಯಗಾರ.

(ನ್ಯೂಸ್ ಕಡಬ) newskadaba.com ಕುಂತೂರು, ಆಗಸ್ಟ್.14.ಇಲ್ಲಿನ ಮಾರ್ ಇವಾನಿಯೋಸ್ ವಿದ್ಯಾಸಂಸ್ಧೆಯಲ್ಲಿ ಮಾನವಿಕ ಸಂಘದ ಉದ್ಘಾಟನೆ ಹಾಗೂ ಮಾದಕ ವ್ಯಸನಗಳ ಕುರಿತು ಜಾಗ್ರತಿ ಮೂಡಿಸುವ ಮಾಹಿತಿ ಕಾರ್ಯಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಪದವಿ ಹಾಗೂ ಬಿ.ಎಡ್. ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಮಾನವಿಕ ಸಂಘದಡಿಯಲ್ಲಿ ಹಮ್ಮಿಕೊಳ್ಳಲಾದ ಮಾದಕ ವ್ಯಸನಗಳ ಕುರಿತು ಜಾಗ್ರತಿ ಮೂಡಿಸುವ ಮಾಹಿತಿ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಸೂರಜ್ ಪದವಿಪೂರ್ವ ಕಾಲೇಜು ಮುಡಿಪು, ಮಂಗಳೂರು, ಇಲ್ಲಿನ ರಸಾಯನಶಾಸ್ತ್ರ ಉಪನ್ಯಾಸಕ ಶ್ರೀ. ರಾಕೇಶ್.ಕೆ.ಎನ್. ಅವರು ನಡೆಸಿಕೊಟ್ಟರು. ಮಾದಕ ವ್ಯಸನಗಳಿಗೆ ಒಳಗಾಗಬಹುದಾದ ವಿದ್ಯಾರ್ಥಿಗಳ ಕಲಿಕೆ, ಆರೋಗ್ಯದಿಂದಾಗಿ ಸಮಾಜದ ಮೇಲೆ ಉಂಟಾಗುವ ದುಷ್ಪರಿನಾಮಗಳ ಕುರಿತಂತೆ ಪಿ.ಪಿ.ಟಿ ಮೂಲಕ ಸವಿಸ್ತಾರವಾದ ಮಾಹಿತಿಯನ್ನು ನೀಡಿ ಜಾಗ್ರತಿ ಮೂಡಿಸಿದರು.

Also Read  ಸುಳ್ಯ : 'ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು' - ಧನಂಜಯ ಕುಂಬ್ಳೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ/ರೆ/ಫಾ/ಡಾ/ ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಮಾತನಾಡುತ್ತಾ ಮಾನವಿಕ ಸಂಘದ ಮಹತ್ವ ಮತ್ತು ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಉಪನ್ಯಾಸಕಿ ಕುಮಾರಿ ಸಿಂತ್ಯಾ ಸೂಸನ್ ಅಥಿತಿಗಳನ್ನು ಪರಿಚಯಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಉಷಾ.ಎಂ.ಎಲ್. ಕಾರ್ಯಾಕ್ರಮದ ಸಂಯೋಜಕರಾದ ಕುಮಾರಿ ತೃಪ್ತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಧಿತರಿದ್ದರು.ಉಪನ್ಯಾಸಕಿ ಶ್ರೀಮತಿ ನೆಸಿಯಾ.ಪಿ ಸ್ವಾಗತಿಸಿ, ಪದವಿ ವಿದ್ಯಾರ್ಥಿನಿ ಕುಮಾರಿ ಸುಹೈಬಾ ಬಾನು ವಂದಿಸಿದರು. ಪ್ರಶಿಕ್ಷಣಾರ್ಥಿ ಕುಮಾರಿ ರೇಷ್ಮಾ ಮೇರಿ ತೋಮಸ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top