ತೋಟಗಾರಿಕೆ ಇಲಾಖೆ ದ.ಕ ಜಿಲ್ಲೆ,ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ➤ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.14.ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದವತಿಯಿಂದ ಆಗಸ್ಟ್ 8 ರಂದು ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಕಚೇರಿ ಸಹಾಯಕರು, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಮಂಗಳೂರು ಪ್ರವೀಣ ಕೆ, ರವರು ಗಿಡಕ್ಕೆ ನೀರು ಹಾಕುವ ಮೂಲಕ ತರಬೇತಿಗೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎ ಸೆಂಥಿಲ್‍ವೆಲ್, ಡೀನ್, ಡಾ. ಟಿ. ಜೆ.ರಮೇಶ ರವರು ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾಜ್ಯವಲಯ), ಮಂಗಳೂರು ತರಬೇತಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿದರು.

Also Read  ಪಿಲಿಕುಳದಲ್ಲಿ ವನಮಹೋತ್ಸವ ಆಚರಣೆ

ರೈತರಿಗೆ ಅಣಬೆ ಬೇಸಾಯದ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಡಾ. ರಶ್ಮಿ ಆರ್ ಸವಿವರವಾಗಿ ತಿಳಿಸಿಕೊಟ್ಟರು. ನಂತರ ಅಣಬೆ ಬೇಸಾಯದ ಪ್ರಾತ್ಯಕ್ಷತೆಯನ್ನು ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಂಗಳೂರು ಜಾನಕಿ ವಿ., ರವರು ತಿಳಿಸಿಕೊಟ್ಟರು. ರೈತರ ಸಂವಾದವನ್ನು ನಡೆಸಲಾಯಿತು. ಇದರಲ್ಲಿ ರೈತರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಹಾಜರಾದ 100 ರೈತರಿಗೆ 1 ಅಣಬೆ ಸ್ಪಾನ್ ಮತ್ತು 2 RTF(ರೆಡಿ ಟು ಪ್ರೂಟ್) ಬ್ಯಾಗ್‍ಗಳನ್ನು ಹಾಗೂ Book pad ಮತ್ತು pen ಗಳನ್ನು ಇಲಾಖಾ ವತಿಯಿಂದ ಉಚಿತವಾಗಿ ನೀಡಲಾಯಿತು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

error: Content is protected !!
Scroll to Top