‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.13.‘ಬುಕ್‌ ಬ್ರಹ್ಮ’ ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆಗೊಳ್ಳಲಿದೆ.ಇದು ಕನ್ನಡ ಸಾಹಿತ್ಯವನ್ನು ಲೋಕಕ್ಕೆ ಪರಿಚಯಿಸುವ ನೆಟ್ವರ್ಕ್ ಇದಾಗಿದೆ.

 

ಪ್ರತಿವರ್ಷ ಕನ್ನಡದಲ್ಲಿ ಪ್ರಕಟವಾಗುವ ಸುಮಾರು 6000 ಪುಸ್ತಕಗಳ ಪೈಕಿ ಸರಿ ಸುಮಾರು 1,000 ಪುಸ್ತಕಗಳಿಗೆ ಮಾತ್ರ ವಿವಿಧ ಮಾಧ್ಯಮ (ಪತ್ರಿಕೆ, ಸೋಷಿಯಲ್ ಮೀಡಿಯಾ)ಗಳಿಂದ ‘ಪರಿಚಯ’ದ ಅವಕಾಶ ದೊರೆಯುತ್ತಿದೆ. ಅದರಿಂದಾಗಿ ಓದುಗರಿಗೆ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಮಾಹಿತಿ ದೊರೆಯುತ್ತಿಲ್ಲ, ಎಲ್ಲಾ ಲೇಖಕರಿಗೆ ಓದುಗರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ ಮತ್ತು ಪುಸ್ತಕದ ವಿಮರ್ಶೆಯೂ ಸಾಧ್ಯವಾಗುತ್ತಿಲ್ಲ.

ಈ ಕೊರತೆಗಳನ್ನು ನೀಗುವ ಉದ್ದೇಶದಿಂದ ‘ಬುಕ್ ಬ್ರಹ್ಮ’ ಎನ್ನುವ ಮಲ್ಟಿಮೀಡಿಯಾ ವೇದಿಕೆ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಪ್ರಯತ್ನವಿದು.ಆದ್ದರಿಂದ  ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಮಾದರಿ ನೆಟ್ವರ್ಕ್ ಪರಿಚಯಿಸುವ ನಿಟ್ಟಿನಲ್ಲಿ, ಲೇಖಕರು, ಓದುಗರು, ಪ್ರಕಾಶಕರು ಮತ್ತು ವಿಮರ್ಶಕರನ್ನು ಒಂದೆಡೆ ಸೇರುವ ಉದ್ದೇಶ ಹೊಂದಿರುವ ಒಂದು ವಿಶೇಷ ಮಾದರಿಯ ಪ್ರಯತ್ನವು ಇದಾಗಿದೆ.

Also Read  ಸ್ನಾನದ ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ - ದೂರು ದಾಖಲು

error: Content is protected !!
Scroll to Top