ಶಿವಾಜಿ ನಗರದಲ್ಲಿ ರಸ್ತೆ ಭೂಕಂಪ ➤ ವಾಹನ ಸಂಚಾರಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.12.ಮರ್ದಾಳ -ಕೆರ್ಮಯಿ ರಸ್ತೆಯ ಶಿವಾಜಿ ನಗರದಲ್ಲಿ ಕಳೆದ 5,6 ದಿನಗಳಿಂದ ಸುರಿಯುತ್ತಿದ್ದ ವಿಪರೀತ ಮಳೆಯಿಂದ ರಸ್ತೆಯಲ್ಲಿ ಒಸರು ಬಂದು ಭೂಕಂಪವಾಗಿ ರಸ್ತೆ ಸಂಪೂರ್ಣ ಹೂತುಕೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಆ. 11ರಂದು ನಡೆದಿದೆ.

ರಸ್ತೆ ಹೊಂಡಬಿದ್ದು ಕೆಸರುಮಯವಾಗಿ ಆಟೋರಿಕ್ಷಾ ಸೇರಿದಂತೆ 2ವೀಲರ್, 4ವೀಲರ್ ಗಾಡಿಗಳು ಕೆಸರಿನಲ್ಲಿ ಹೂತು ಹೋಗುತ್ತಿದ್ದು ಮುಂದಕ್ಕೆ ಚಲಿಸದೆ ಪರಿಸರದವರು ಬಂದು ಮರದ ತುಂಡುಗಳನ್ನು ಹಾಕಿ ವಾಹನ ಮೇಲಕ್ಕೆ ಎತ್ತಲು ಸಹಕರಿಸಿದ್ದು ನಂತರ ಯಾವುದೇ ವಾಹನ ಆ ರಸ್ತೆಯಲ್ಲಿ ಚಲಿಸದಾಗಿದೆ. ಸಮಸ್ಯೆಯ ಗಂಬೀರತೆಯನ್ನರಿತ ಐತೂರು ಗ್ರಾ.ಪಂ ಅಧ್ಯಕ್ಷ ಸತೀಶ್.ಕೆರವರು ಸ್ಥಳಕ್ಕೆ ಬೇಟಿ ನೀಡಿದ್ದು ಕೂಡಲೇ ಜಿ.ಪಂ ಸಹಾಕಯ ಇಂಜಿನಿಯರ್ ಭರತ್‍ರವರು ಕೂಡಾ ಆಗಮಿಸಿ ಸಮಸ್ಯೆಯ ಬಗ್ಗೆ ಸ್ಪಂದಿಸಿ ಸ್ಥಳೀಯ ಗುತ್ತಿಗೆದಾರರಿಂದ ಸದ್ಯಕ್ಕೆ ಕೆಂಪು ಕಲ್ಲು ಹಾಗೂ ದಪ್ಪ ಹ್ಯೊಗೆ ಹಾಕಿ ದುರಸ್ತಿ ಮಾಡುವಂತೆ ಸೂಚಿಸಿದರು. ಸದ್ಯಕ್ಕೆ ರಸ್ತೆ ಸಂಚಾರ ಸುಗಮಗೊಳಿಸಲಾಯಿತು.

Also Read  ಜೀವನದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ ಈ ವಿಧಾನವನ್ನು ಅನುಸರಿಸಿ

error: Content is protected !!
Scroll to Top