(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ.
ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಭೂ ಕುಸಿತ ಹೆಚ್ಚಳವಾದ ಕಾರಣ ಸಂಪೂರ್ಣ ರಸ್ತೆಯೇ ನಾಶವಾಗುವ ಹಂತದಲ್ಲಿದೆ. ಬನ್ಕಲ್ ವ್ಯಾಪ್ತಿಯಲ್ಲಿ ರಸ್ತೆ ಅಂಚು ವಿಪರೀತ ಕುಸಿತಗೊಂಡಿರುವ ಕಾರಣ ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಇದರಿಂದಾಗಿ ಬೆಳ್ತಂಗಡಿ ಚಿಕ್ಕಮಗಳೂರು ಸಂಪರ್ಕ ಕಡಿತವಾಗಿದ್ದು, ಮುಂದಿನ ನಾಲ್ಕು ತಿಂಗಳು ಚಾರ್ಮಾಡಿ ಘಾಟಿಯ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.