ಇಚ್ಲಂಪಾಡಿ: ನದಿಗೆ ಬಾಗಿನ ➤ ಸ್ವಚ್ಚತಾ ಕಾರ್ಯ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.10.ರಾಜ್ಯಾದ್ಯಂತ ಸುರಿಯುತ್ತಿರುವ ಬಾರೀ ಮಳೆಯಿಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಇಚ್ಲಂಪಾಡಿಯಲ್ಲಿ ಹರಿಯುತ್ತಿರುವ ಗುಂಡ್ಯಹೊಳೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಸಂಜೆ ವೇಳೆ ಪ್ರಮಾಣ ಕಡಿಮೆಯಾಗಿದೆ.


ನೀರಿದ ಪ್ರಮಾಣ ಹೆಚ್ಚಿದ್ದರಿಂದ ನಾಡಿಗೆ ಒಲಿತಾಗಲೆಂದು ಹಾಗೂ ಯಾವುದೇ ಅಪಾಯ ಸಂಭವಿಸದಿರಲೆಂದು ನೂಜಿಬೈಲ್ ತೆಗ್‍ರ್ ತುಳುಕೂಟ ಸಂಚಾಲಕ ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಗುರುವಾರ ನದಿಗೆ ಭಾಗಿನ ಅರ್ಪಿಸಿ, ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಇಚ್ಲಂಪಾಡಿ ಸೇತುವೆಯಲ್ಲಿ ನೀರು ನಿಂತು ಜಾರುವ ಸ್ಥಿತಿ ನಿರ್ಮಾಣವಾಗಿರುವುದನ್ನು ಸ್ವಚ್ಚಗೊಳಿಸಿ, ನೀರು ಸೇತುವೆಯಿಂದ ಹರಿದು ಹೋಗುವಂತೆ ಮಾಡಿದರು. ಜೊತೆಗೆ ಸೇತುವೆಯುದ್ದಗಲಕ್ಕೂ ಸ್ವಚ್ಚತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡೀಕಯ್ಯ ಗೌಡ, ದಿವಾಕರ ಬಾಂತಾಜೆ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

Also Read  SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್‌

error: Content is protected !!
Scroll to Top