ಗುರುಪುರ ಹೋಬಳಿ ಮೊಗರು ಗ್ರಾಮದ ಮಳಲಿಪೇಟೆ ➤ ವಶಪಡಿಸಿರುವ 880 ಕೆ.ಜಿ. ಪಡಿತರ ಅಕ್ಕಿ ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ಗುರುಪುರ ಹೋಬಳಿ ಮೊಗರು ಗ್ರಾಮದ ಮಳಲಿಪೇಟೆ ಎಂಬಲ್ಲಿ ಆಹಾರ ಇಲಾಖೆ ವಶಪಡಿಸಿಕೊಂಡಿರುವ 880 ಕೆ.ಜಿ. ಪಡಿತರ ಅಕ್ಕಿಯನ್ನು ಬಹಿರಂಗ ಹರಾಜು ಮಾಡಲು ಮಂಗಳೂರು ಸಹಾಯಕ ಆಯುಕ್ತರು ಆದೇಶಿಸಿರುತ್ತಾರೆ.


ಈ ಹಿನ್ನೆಲೆಯಲ್ಲಿ ಆಗಸ್ಟ್ 19 ರಂದು ಬೆಳಿಗ್ಗೆ 11.30 ಗಂಟೆಗೆ ಸಂಖ್ಯೆ 52, ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆ ಮಳಲಿಪೇಟೆ ನ್ಯಾಯಬೆಲೆ ಅಂಗಡಿಯ ಆವರಣದಲ್ಲಿ ಆಹಾರ ಶಿರಸ್ತೇದಾರರು ಮಂಗಳೂರು ತಾಲೂಕು ಇವರು ಹರಾಜು ನಡೆಸುವರು. ಯಶಸ್ವೀ ಬಿಡ್ಡುದಾರರು ಸ್ಥಳದಲ್ಲಿ ಬಿಡ್ಡಿನ ಮೊತ್ತದ ಅರ್ಧದಷ್ಟು ಹಣ ಪಾವತಿಸಬೇಕು. ಉಳಿದ ಮೊತ್ತವನ್ನು ಮುಂದಿನ ಮೂರು ದಿನಗಳಲ್ಲಿ ಪೂರ್ಣವಾಗಿ ಪಾವತಿಸಿದ ನಂತರ ಅಕ್ಕಿಯನ್ನು ಪೂರ್ಣವಾಗಿ ಎತ್ತುವಳಿ ಮಾಡಬಹುದಾಗಿದೆ.ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಮುಂಗಡ ಠೇವಣಿ ರೂ. 700/-ನ್ನು ಸಂದಾಯ ಮಾಡಿ ಏಲಂ ನಲ್ಲಿ ಭಾಗವಹಿಸಬಹುದು ಎಂದು ಮಂಗಳೂರು ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸದೆ.

Also Read  ಫ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ- ಮಹಾನಗರಪಾಲಿಕೆ ಎಚ್ಚರಿಕೆ

error: Content is protected !!
Scroll to Top