(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಮುಕ್ಕೂರು ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಆ.18 ರಂದು ನಡೆಯಲಿರುವ ಕ್ರೀಡಾಕೂಟ ಮತ್ತು ಆ.31 ರಂದು ರಾತ್ರಿ ನಡೆಯಲಿರುವ ಹತ್ತರ ಹುತ್ತರಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಪೆರುವಾಜೆ ಜಲದುರ್ಗಾದೇವಿ ದೇವಸ್ಥಾನ ಹಾಗೂ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.
ಪ್ರಾರಂಭದಲ್ಲಿ ಉಭಯ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಅರ್ಚಕರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಕಾರ್ಯಾಧ್ಯಕ್ಷ ಉಮೇಶ್ ಕೆಎಂಬಿ, ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು, ಕೋಶಾಧಿಕಾರಿ ರಮೇಶ್ ಕಾನಾವು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಕೆ.ಎನ್., ಕಾರ್ಯದರ್ಶಿ ಕಿರಣ್, ಕೋಶಾಧಿಕಾರಿ ರಾಮಚಂದ್ರ ಚೆನ್ನಾವರ, ಸಮಿತಿ ಸದಸ್ಯರಾದ ಕುಂಞಣ್ಣ ನಾಯ್ಕ ಅಡ್ಯತಕಂಡ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರಕ್ಷಿತ್ ಗೌಡ ಒರುಂಕು, ಶೀನ ಅನವುಗುಂಡಿ, ವೆಂಕಟರಮಣ ಕುಂಡಡ್ಕ, ರವಿ ಕುಂಡಡ್ಕ, ಶಾರದೋತ್ಸವ ಸಮಿತಿಯ ದಿವಾಕರ ಬೀರುಸಾಗು ಮೊದಲಾದವರು ಉಪಸ್ಥಿತರಿದ್ದರು.
