ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿ ಡಿಸೈನ್ ಸ್ಪರ್ಧೆಯನ್ನು “ಮಕ್ಕಳ ಹಕ್ಕುಗಳು” ಎಂಬ ವಿಷಯದಲ್ಲಿ 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ. ಡಿಸೈನ್ ಸ್ವಂತದ್ದಾಗಿದ್ದು, ಸ್ಪೀಡ್ ಪೋಸ್ಟ್ ಮುಖಾಂತರ ಎ4 ಸೈಜ್ ಎನ್ವಲಪ್‍ನಲ್ಲಿ “ಮಕ್ಕಳ ದಿನಾಚರಣೆ 2019- ಸ್ಟಾಂಪ್ ಡಿಸೈನ್ ಸ್ಪರ್ಧೆ” ಎಂದು ನಮೂದಿಸಿರಬೇಕು.

ಅಸಿಸ್ಟೆಂಟ್ ಡೈರೆಕ್ಟರ್ ಜನರಲ್, ರೂಮ್ ನಂ 108, ಡಾಕ್ ಭವನ್, ಪಾರ್ಲಿಮೆಂಟ್ ರಸ್ತೆ, ದೆಹಲಿ-110001” ಈ ವಿಳಾಸಕ್ಕೆ ಸಪ್ಟೆಂಬರ್ 20 ರ ಒಳಗಡೆ ತಲುಪಿಸಬೇಕು. ಬಹುಮಾನದ ಮೊತ್ತವು ಪ್ರಥಮ ರೂ.50,000, ದ್ವೀತಿಯ ರೂ.25,000, ತೃತೀಯ 10,000 ಬಹುಮಾನಗಳು ಹಾಗೂ ರೂ 5,000 ರೂಪಾಯಿಗಳ 5 ಸಮಾಧಾನಕರ ಬಹುಮಾನಗಳನ್ನು ಒಳಗೊಂಡಿರುತ್ತದೆ.

Also Read  ಬಂಟ್ವಾಳ: ಅಝಾನ್ ವಿರುದ್ಧ ಅಪಪ್ರಚಾರ ಮಾಡಿದ ಪ್ರಚೋದನಕಾರಿ ಭಾಷಣಗಾರ್ತಿ ಹಾರಿಕಾ ಮಂಜುನಾಥ್ ವಿರುದ್ಧ ಬಿಸ್ಮಿಲ್ಲಾ ಜುಮ್ಮಾ ಮಸ್ಜಿದ್ ವತಿಯಿಂದ ದೂರು ದಾಖಲು

ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top