ಮಳೆಗೆ ಕೃಷಿ ತೋಟ ಜಲಾವೃತ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ದಿನ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆ ಬದಿಯ ಕೃಷಿ ಪ್ರದೇಶಗಳು ಜಲಾವೃತಗೊಂಡ ಬಗ್ಗೆ ವರದಿಯಾಗಿದೆ.

ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಸಮೀಪದ ಕುಂಬ್ಲಾಯಿ ಉದಯ ಕುಮಾರ್ ಎಂಬವರ ಅಡಿಕೆ ತೋಟ ಹಾಗೂ ವಸಂತ ಕುಂಬ್ಲಾಯಿ ಎಂಬವರ ಅಡಿಕೆ, ರಬ್ಬರ್ ತೋಟಕ್ಕೆ ನೀರು ನುಗ್ಗಿದ್ದು, ತೋಟ ಪೂರ್ತಿ ಜಲಾವೃತಗೊಂಡಿದ್ದು, ಹೊಳೆ ಬದಿಯ ಹಲವರ ಕೃಷಿ ಭೂಮಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ನೆನ್ನೆ ಸಂಜೆ ವೇಳೆ ನೀರು ಕಡಿಮೆಯಾಗತೊಡಗಿದೆ. ನೂಜಿಬಾಳ್ತಿಲ ಗ್ರಾಮದ ಮೂಲಕ ಹರಿಯುತ್ತಿರುವ ಗುಂಡ್ಯ ಹೊಳೆಯು ಮಂಗಳವಾರವೇ ತುಂಬಿ ಹರಿಯುತ್ತಿತ್ತು, ಬುಧವಾರ ನೀರಿನ ಪ್ರಮಾಣ ಹೆಚ್ಚಳಗೊಂಡು ಕೃಷಿ ತೋಟ ಜಲಾವೃತಗೊಂಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

Also Read  ಪಿಲಿಕುಳ ವಿಜ್ಞಾನ ಪ್ರದರ್ಶನ ಪುನರಾರಂಭ

 

error: Content is protected !!
Scroll to Top