(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಕೋಟೆಕಾರು ಪಟ್ಟಣ ಪಂಚಾಯತ್ 2019-20ನೇ ಸಾಲಿನ ಎಸ್.ಎಫ್.ಸಿ ಮತ್ತು ಪಟ್ಟಣ ಪಂಚಾಯತ್ ನಿಧಿಯಡಿ ವಿವಿಧ ಸೌಲಭ್ಯಗಳಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಡಜನರ ಕಲ್ಯಾಣ ಕಾರ್ಯಕ್ರಮ ಶೇ 7.50ರಲ್ಲಿ ಮನೆಗೆ ಗ್ಯಾಸ್ ಸಂಪರ್ಕ, ಪ್ರಥಮ ಪಿ.ಯು.ಸಿಯಲ್ಲಿ ಓದುತ್ತಿದ್ದು ಎಸ್.ಎಸ್.ಎಲ್.ಸಿ ಯಲ್ಲಿ ಶೇ 70 ಕ್ಕಿಂತ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಶೇಕಡ 24.10% ಕ್ಕೆ ಕಾಯ್ದಿರಿಸಿದ ಮೊತ್ತದಲ್ಲಿ ಆರೋಗ್ಯ ವಿಮಾ ಯೋಜನೆ, ಅಡುಗೆ ಅನಿಲ ಸಂಪರ್ಕ, ಸ್ವ ಉದ್ಯೋಗ, ವಿದ್ಯಾರ್ಥಿ ವೇತನ, ನಿವೇಶನ ಖರೀದಿಗೆ ಸಹಾಯಧನ ಹಾಗೂ ಮನೆ ದುಸ್ತಿಗೆ ಸಹಾಯಧನ ನೀಡಲಾಗುವುದು.
ವಿಕಲಚೇತನರಿಗೆ ಶೇಕಡಾ 5ರ ನಿಧಿಯಲ್ಲಿ ಪೋಷಣಾ ಭತ್ಯೆ ನೀಡಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 20 ಎಂದು ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.