ಜಾಗತಿಕ ಸ್ತನ್ಯಪಾನ ಕಾರ್ಯಕ್ರಮ ಮತ್ತು ಡೆಂಗ್ಯೂ ಜಾಗೃತಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಜಾಗತಿಕ ಸ್ತನ್ಯಪಾನ ಕಾರ್ಯಕ್ರಮ ಮತ್ತು ಡೆಂಗ್ಯೂ ಜಾಗೃತಿ ಅಭಿಯಾನವನ್ನು ಆಗಸ್ಟ್ 6 ರಂದು ಅಕ್ಷರ ಸದನ ಬೋಳೂರು, ಅಂಗನವಾಡಿ ಕೇಂದ್ರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.


ವಿವೇಕಾನಂದ ಯುವಕೇಂದ್ರ ಗೌರವಾಧ್ಯಕ್ಷ ವಾಸುದೇವ ಬೋಳೂರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವೈದ್ಯಾಧಿಕಾರಿ ಡಾ. ಹೇಮವಾಣಿ.ಪಿ. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ತನ್ಯಪಾನದ ಮಹತ್ವ ಮತ್ತು ಡೆಂಗ್ಯೂ ರೋಗದ ಲಕ್ಷಣಗಳು, ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಕುಮುದಾಕ್ಷಿ ಮತ್ತು ಶುಶ್ರೂಷಕಿ ಪ್ರಶಾಂತಿ ಇವರು ಸಹಕರಿಸಿದರು ಎಂದು ಜಿಲ್ಲಾ ಆಯುಷ್ ಅಧಿಕಾರಿ, ದ.ಕ ಜಿಲ್ಲೆ ಇವರ ಪ್ರಕಟನೆ ತಿಳಿಸಿದೆ.

Also Read  ಡಿ.10 ರಂದು ಅಂಚೆ ಪಿಂಚಣಿ ಅದಾಲತ್

error: Content is protected !!
Scroll to Top