ಕರಾವಳಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ➤ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ನೈಸರ್ಗಿಕದತ್ತವಾದ ಪ್ರಾಕೃತಿಕ, ಪಾರಂಪರಿಕ ಸಾಂಸ್ಕøತಿಕ ಚೆಲುವನ್ನು ಹೊಂದಿದೆ ಆದ್ದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಹೇಳಿದರು.


ಅವರು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಏರ್ಪಡಿಸಲಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕುರಿತು “ಕನೆಕ್ಟ್-2019”ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಬೇಕಾಗುವ ಮೂಲಭೂತವಾದ ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿದ್ದರೂ ಕೂಡ ಪ್ರವಾಸೋದ್ಯಮವನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಎರಡು ಜಿಲ್ಲೆಗಳ ಉದ್ಯಮೆದಾರರು ಮತ್ತು ಸಣ್ಣ ಪ್ರಮಾಣದ ಹೂಡಿಕೆದಾರರು ಈ ಪ್ರವಾಸೋದ್ಯಮಕ್ಕೆ ಸಹಾಯಕಾರಿಯಾದ ವಾತಾವರಣವನ್ನು ಉದ್ಯಮದ ಮೂಲಕ ಅಂದರೆ ಹೋಟೆಲ್‍ಗಳು, ಟ್ರ್ಯಾವಲರ್ಸ್ ಮತ್ತು ಹೋಮ್ ಸ್ಟೇಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಸಹಕಾರ ನೀಡಬೇಕು.

ಬೆಂಗಳೂರಿನಲ್ಲಿ ಆಗಷ್ಟ್ 25 ರಿಂದ 27ರ ವರೆಗೆ ನಡೆಯುವ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರ್ಯಾವಲ್ ಎಕ್ಸ್‍ಪೋ-2019 ಕಾರ್ಯಕ್ರಮದಲ್ಲಿ ಸಾಕಷ್ಟು ಮಾಹಿತಿ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅನೇಕ ವಿಚಾರಗಳು ವಿನಿಮಯವಾಗಲಿದೆ. ಹಾಗಾಗಿ ಕರಾವಳಿಯನ್ನು ಪ್ರವಾಸೋದ್ಯಮದಲ್ಲಿ ಮತ್ತಷ್ಟು ಸುಂದರವಾಗಿಸುವುದಕ್ಕೆ ಸಹಕಾರಿಯಾಗಲಿದೆ. ಎಲ್ಲಾ ಹೂಡಿಕೆದಾರರು, ಸಣ್ಣ ಪ್ರಮಾಣದ ಮತ್ತು ದೊಡ್ಡ ಪ್ರಮಾಣದ ಉದ್ಯಮಿಗಳು ಭಾಗವಹಿಸಿ ಆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ ಇಲಾಖೆ ಜಂಟಿ ಆಯುಕ್ತರಾದ ಡಾ. ಎಸ್. ನವೀನ್ ಕುಮಾರ್ ರಾಜುರವರು ಮಾತನಾಡಿ, ಕರ್ನಾಟಕ ಇಂಟರ್‍ನ್ಯಾಷನಲ್ ಟ್ರ್ಯಾವಲ್ ಎಕ್ಸ್‍ಪೋ-2019 ಕಾರ್ಯಕ್ರಮವು ಸುಮಾರು ಎರಡು ವರ್ಷಗಳ ನಿರಂತರ ಪರಿಶ್ರಮದಿಂದ ತಯಾರಿ ನಡೆಯುತ್ತಿದ್ದು, ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ತಂದು ಕೊಡುವ ಕನಸಿನ ಕಾರ್ಯಕ್ರಮ ಇದಾಗಿದೆ.

Also Read  ಬಾವಿಗೆ ಬಿದ್ದ ಯುವಕ- ಅಗ್ನಿಶಾಮಕ ದಳದಿಂದ ರಕ್ಷಣೆ

ಈ ಕಾರ್ಯಕ್ರಮದ ಮೂಲ ಉದ್ದೇಶವೇ ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಮತ್ತು ಉದ್ದಿಮೆದಾರಿಗೆ ತಮ್ಮ ಉದ್ಯಮವನ್ನು ಬೇರೆ ಬೇರೆ ದೇಶದ ಮತ್ತು ರಾಜ್ಯಗಳ ಪ್ರವಾಸಿಗಳಿಗೆ ಪರಿಚಯಿಸುವುದಕ್ಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜನ ಮಾಡುವುದಕ್ಕೆ ಒಂದು ಒಳ್ಳೆಯ ವೇದಿಕೆಯಾಗಲಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ. ಉದ್ದಿಮೆದಾರರು ಈಗಾಗಲೇ ರಾಜ್ಯದ ಎಲ್ಲಾ ಕಡೆಗಳಿಂದ ನೋಂದಣಿ ಪ್ರಾರಂಭವಾಗಿದೆ, ಹಾಗಾಗಿ 2018-19ರಲ್ಲಿ ಸರ್ಕಾರವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಟೂರಿಸಂ ಸೊಸೈಟಿ ಎಂದು ನೂತನವಾಗಿ ಪ್ರಾರಂಭಿಸಿದೆ. ಹಿಂದೆ ಹೋಟೆಲ್ ಮಾಲೀಕರು, ಟ್ರ್ಯಾವಲರ್ಸ್, ಮತ್ತು ಹೋಮ್ ಸ್ಟೇ ಮಾಲೀಕರು ತಮ್ಮ ಸಮಸ್ಯೆ ಹಾಗೂ ಪರಿಹಾರೋಪಾಯಕ್ಕೆ ಪ್ರತ್ಯೇಕವಾಗಿ ಸರ್ಕಾರಕ್ಕೆ ಬೇಡಿಕೆಗಳನ್ನು ಕೊಡಲಾಗುತ್ತಿದ್ದು ಆದರೆ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

Also Read  ಕಲ್ಲೇಗ :4 ವಾಹನಗಳ ನಡುವೆ ಸರಣಿ ಅಪಘಾತ

ಹಾಗಾಗಿ ಈ ಎಲ್ಲಾ ಉದ್ದಿಮೆದಾರರ ಸಮಸ್ಯೆಗಳು ಒಂದೇ ಸೂರಿನಡಿಯದಲ್ಲಿ ಇತ್ಯರ್ಥವಾಗುವುದಕ್ಕೆ ಈ ಕರ್ನಾಟಕ ಟೂರಿಸಂ ಸೊಸೈಟಿಯನ್ನು ಸ್ಥಾಪನೆ ಮಾಡಲಾಯಿತು ಎಂದುಹೇಳಿದರು.ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ, ಮಂಗಳೂರು ಸಹಾಯಕ ನಿರ್ದೇಶಕರಾದ ಡಾ. ಉದಯ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ, ಉಡುಪಿ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ನಾಯ್ಕ್, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷರಾದ ಮನೋಹರ ರೈ ಹಾಗೂ ಹೋಟೆಲ್ ಅಸೋಸಿಯಶನ್, ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷರಾದ ಕುಡಿಪಿ ಜಗದೀಶ್ ಶೆಣೈ, ಕರ್ನಾಟಕ ಟೂರಿಸಂ ಸೊಸೈಟಿಯ ಚೇರ್ಮನ್ ಮೇಂಬರ್‍ಶಿಫ್ ಡಿವಿಸನ್ ಸದಸ್ಯರಾದ ಜಗದೀಶ ಮತ್ತು ಎರಡು ಜಿಲ್ಲೆಗಳ ಉದ್ದಿಮೆದಾರರು ಹಾಗೂ ಪ್ರವರ್ತಕರು ಉಪಸ್ಥಿತರಿದ್ದರು.

error: Content is protected !!
Scroll to Top