ದ.ಕ ಜಿಲ್ಲೆಯಲ್ಲಿ ಜರುಗುವ ಹಬ್ಬ ಹರಿದಿನಗಳಲ್ಲಿ ➤ ಪ್ರಾಣಿ ಬಲಿ – ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ದ.ಕ ಜಿಲ್ಲೆಯಲ್ಲಿ ಜರುಗುವ ಬಕ್ರೀದ್ ಹಾಗೂ ಇತರೆ ಹಬ್ಬ ಹರಿದಿನಗಳಲ್ಲಿ ಪೂಜಾ ಸ್ಥಳಗಳಲ್ಲಿ/ಮಂದಿರಗಳಲ್ಲಿ ಸಾಮೂಹಿಕ ಪ್ರಾಣಿ ಹತ್ಯೆಯನ್ನು ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ ನಿಯಮದಂತೆ ಪ್ರಾಣಿ/ಕೋಳಿ ಬಲಿ ಕೊಡುವುದು ನಿಷೇಧಿಸಲ್ಪಟ್ಟಿದೆ ಹಾಗೂ ಪ್ರಾಣಿಗಳನ್ನು ಬಲಿ ಕೊಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಕರ್ನಾಟಕ ಗೋವಧೆ ಪ್ರತಿಬಂದಕ ಕಾಯ್ದೆ ಹಾಗೂ ಜಾನುವಾರು ಪರಿರಕ್ಷಣಾ ಅಧಿನಿಯಮ 64ರ ಸೆಕ್ಷನ್-4 ರ ಪ್ರಕಾರ ಗೋವು ಅಥವಾ ಎಮ್ಮೆಯ ಕರುವಿನ ವಧೆಯನ್ನು ನಿಷೇಧಿಸಿದೆ.ಈ ಎಲ್ಲಾ ಆದೇಶಗಳು ಮತ್ತು ನಿರ್ದೇಶನಗಳ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಿ/ಪಕ್ಷಿಗಳನ್ನು ಸಾರ್ವಜನಿಕವಾಗಿ ಪೂಜಾಸ್ಥಳಗಳಲ್ಲಿ/ಮಂದಿರಗಳಲ್ಲಿ ಬಲಿ ಕೊಡಬಾರದಾಗಿ ಅಥವಾ ಅದನ್ನು ಬೆಂಬಲಿಸಬಾರದಾಗಿ ಈ ಮೂಲಕ ಎಲ್ಲಾ ಪ್ರಾರ್ಥನಾ ಮಂದಿರಗಳ ಕಾರ್ಯನಿರ್ವಾಹಕರು/ಸಂಚಾಲಕರುಗಳಲ್ಲಿ ಹಾಗೂ ಸಾರ್ವಜನಿಕರಿಗೆ ತಿಳಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಪ್ರಾಣಿ ಬಲಿ ಅಥವಾ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದೆಂದು ಎಂದು ಉಪನಿರ್ದೇಶಕರು ಪಶುಪಾಲನಾ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ➤ ಲಂಡನ್ ಕೇರಳ ಮೂಲದ ನರ್ಸ್ ಮತ್ತು ಇಬ್ಬರು ಮಕ್ಕಳ ನಿಗೂಢ ಸಾವು!

error: Content is protected !!
Scroll to Top