ಮಾರಕಾಸ್ತ್ರಗಳಿಂದ ಯುವಕನ ಕೊಲೆ ಮಾಡಿದ ನಾಲ್ವರು ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಆಗಸ್ಟ್.7.ಮಳವಳ್ಳಿ ತಾಲೂಕಿನ ಸಾತನೂರು ಬಳಿಯ ಕಾಳೇಗೌಡನದೊಡ್ಡಿಯ ಚಿಕ್ಕದೇವಯ್ಯ ಎಂಬುವರ ಪುತ್ರ ರಾಮು ಎಂಬಾತನನ್ನು ಹಾಡಹಗಲಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ರಾಮು(30) ಕೊಲೆಯಾದವ.ರಾಮು ಹಲಗೂರಿನಲ್ಲಿ ಬಿ.ಕೆ. ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದ. ಇಂದು ರಾಮು ಅಂಗಡಿಯಲ್ಲಿದ್ದಿದ್ದನ್ನು ನೋಡಿ ಬೆಳಗ್ಗೆ 10.10ಕ್ಕೆ ಮಾರಕಾಸ್ತ್ರಗಳನ್ನು ಹಿಡಿದು ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿ ಧೈರ್ಯದಿಂದಲೇ ಹೊರಗೆ ಮಚ್ಚು ಬೀಸುತ್ತ ಬಂದಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕನನ್ನು ತಕ್ಷಣ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಷ್ಟರಲ್ಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಘಟನಾ ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಕಾಸರಗೋಡು: ನಾಪತ್ತೆಯಾಗಿದ್ದ ಶಿಕ್ಷಕ ಬಾವಿಯಲ್ಲಿ ಶವವಾಗಿ ಪತ್ತೆ

 

error: Content is protected !!
Scroll to Top