ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆ: ಸಾರ್ವಜನಿಕರಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮ➤ಬೆಳ್ಳಾರೆ ಪೊಲೀಸ್ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಮುಂಜಾಗೃತೆವಹಿಸುವಂತೆ ಬೆಳ್ಳಾರೆ ಪೋಲೀಸ್ ಠಾಣಾಧಿಕಾರಿಯವರು ಸೂಚನೆ ನೀಡಿದ್ದಾರೆ.

ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆಗಳಿದ್ದು, ಇಂತಹವುಗಳ ಕಡೆಗೆ ಸಾರ್ವಜನಿಕರಾಗಲಿ ಅಥವಾ ತಮ್ಮ ಮಕ್ಕಳಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆಯಿಂದ ವಹಿಸತಕ್ಕದ್ದು , ಹೆಚ್ಚು ಮಳೆಯಿಂದಾಗಬಹುದಾದ ಅವಘಡಗಳೇನಾದರೂ ತಮ್ಮ ಪರಿಸರದಲ್ಲಿ ಸಂಭವಿಸಿದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು, ನೈಸರ್ಗಿಕ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ. ಅಂತಹ ಘಟನೆಗಳು ಸಂಭವಿಸಿದ ಕೂಡಲೇ ಠಾಣಾ ದೂರವಾಣಿ 08257-271995.ಅಥವಾ ಠಾಣಾ ಸಬ್ ಇನ್ಸ್‍ಪೆಕ್ಟರ್ (9743053901)ರವರ ಗಮನಕ್ಕೆ ತರುವಂತೆ ಬೆಳ್ಳಾರೆ ಠಾಣಾ ಪಿಎಸೈ.ಡಿ.ಎನ್. ಈರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕೇಂದ್ರ ಸರ್ಕಾರದ ಸಾಲ 155 ಲಕ್ಷ ಕೋಟಿ ➤ ನಿರ್ಮಲಾ ಸೀತಾರಾಮನ್‌

error: Content is protected !!
Scroll to Top