“ಭಟ್ ಎಸೋಸಿಯೇಟ್ಸ್ ಸಂಸ್ಥೆಯ ಉದ್ಘಾಟನೆ”

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.ಗೃಹ ನಿರ್ಮಾಣ, ಅಡಮಾನ ಸಾಲ (Mortgag Loan) ಉದ್ದಿಮೆ ಸಾಲ ಹಾಗೂ ಇತರ ಸಾಲ ಸೌಲಭ್ಯಕ್ಕಾಗಿ ಬೇಕಾಗುವ ಪ್ರಾಜೇಕ್ಟ್ ರಿಪೋರ್ಟ್ ಇತ್ಯಾದಿ ಸೇವೆಗಳನ್ನು ಒದಗಿಸುವ ಸಲುವಾಗಿ ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ಶ್ರೀ ಎ.ಎಸ್ ಭಟ್ ಅವರು “ಭಟ್ ಎಸೋಸಿಯೇಟ್ಸ್” ಎಂಬ ಸಂಸ್ಥೆಯನ್ನು ಬಿಜೈ ಆನೆಗುಂಡಿ ಸಮೀಪ ಇರುವ ಭಾರತಿ ರೆಸಿಡೆನ್ಸಿಯಲ್ಲಿ ಸ್ಥಾಪಿಸಿದ್ದಾರೆ.

ಇದರ ಉದ್ಘಾಟನೆಯನ್ನು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕ ಶ್ರೀ ಯೋಗೀಶ್ ಆಚಾರ್ಯ ಇವರು ಇತ್ತಿಚಿಗೆ ನೆರವೇರಿಸಿ, ಮಾತನಾಡಿ ಭಟ್ ಎಸೋಸಿಯೇಟ್ಸ್ ಸಂಸ್ಥೆಯಿಂದ ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಮಾರ್ಗದರ್ಶನ ಸಿಗಲೆಂದು ಆಶಿಸಿದರು ಹಾಗೂ ಸಂಸ್ಥೆಯ ಯಶಸ್ವಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಈ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕಿನ ನಿವೃತ್ತ ಅದ್ಯಕ್ಷ ಶ್ರೀ ಅನಂತ ಕೃಷ್ಣ, ಮಾನಪದ ಮಾಜಿ ಕಾರ್ಪೋರೇಟರ್ ಲ್ಯಾನ್ಸ್ ಲಾಟ್ ಪಿಂಟೋ, ಡಾ: ಮುರಲೀ ಮೋಹನ್ ಚೂಂತಾರು, ಸಿ.ಎ. ಶ್ರೀ ಎಸ್, ಎಸ್ ನಾಯಕ್, ಸೇಲ್ಸ್ ಟ್ಯಾಕ್ಸ್ ಕನ್ಸಲ್ಟಂಟ್ ಶ್ರೀ ಎಸ್.ಎಲ್. ನಾಯಕ್, ಶ್ರೀ ಟಿ.ಆರ್. ಭಟ್, ಶ್ರೀ ಐ.ಸಿ. ಶೆಟ್ಟಿ, ಶಶಿಧರ್, ವಾಲ್ಟರ್ ಸಿಕ್ವೇರಾ ಅತಿಥಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರವರ್ತಕ ಶ್ರೀ ಎ.ಎಸ್. ಭಟ್ ಅವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Also Read  ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ ➤ ಇಬ್ಬರು ಮೃತ್ಯು

error: Content is protected !!
Scroll to Top