(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.7.ಕಳೆದರಡು ದಿನಗಳಿಂದ ಈ ಭಾಗದಲ್ಲಿ ನಿರಂತರ ಧಾರಕಾರ ಮಳೆಯಾಗುತ್ತಿದ್ದು, ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಎಂಬಲ್ಲಿ ಗುಂಡ್ಯ ಹೊಳೆಗೆ ಅಡ್ಡಲಾಗಿರುವ ಹಳೆಯದಾದ ಮುಳುಗು ಸೇತುವೆ ಕಳೆದ ರಾತ್ರಿಯಿಂದ ಹಲವು ಭಾರಿ ಮುಳುಗಡೆಯಾಗಿ ತೆರವುಗೊಳ್ಳುತ್ತಿದೆ. ಸೇತುವೆ ಮೇಲೆ ಬೃಹತ್ ಮರದ ದಿಮ್ಮಿಗಳು, ಕಸಕಡ್ಡಿಗಳು ಸಂಗ್ರವಾಗಿದೆ. ಈ ಹಳೆ ಸೇತುವೆ ಪಕ್ಕದಲ್ಲಿರುವ ನೂತನ ಸೇತುವೆ ಈ ಭಾರಿ ಸಂಚಾರಕ್ಕೆ ಮುಕ್ತವಾಗಿದೆ. ಹಾಗಾಗಿ ಸುಗಮ ಸಂಚಾರಕ್ಕೆ ತೊಡಕಾಗುವುದಿಲ್ಲ.
ಹಳೆ ಸೇತುವೆ ಸಂಪರ್ಕ ರಸ್ತೆ ಮುಕ್ತ, ಅಪಾಯ:ಹಳೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಡಬಕ್ಕೆ ತೆರಳುವ ಭಾಗದಲ್ಲಿ ರಸ್ತೆಗೆ ಮಣ್ಣು ಸುರಿಯಲಾಗಿದೆ. ಆದರೆ ಸೇತುವೆಯ ಉಪ್ಪಿನಂಗಡಿಗೆ ತೆರಳುವ ಭಾಗದಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. ಇಲ್ಲಿ ಯಾವೂದೆ ತಡೆ ಬೇಲಿಯಿಲ್ಲದೆ ಜನ ಸೇತುವೆ ಮೇಲೆ ಓಡಾಡುವಂತಾಗಿದೆ. ಇದರಿಂದ ಅಪಾಯ ಎದುರಾಗಿದೆ. ನೆರೆ ನೀರಿನಲ್ಲಿ ತೇಲಿ ಬರುವ ತೆಂಗಿನ ಕಾಯಿ ಹಿಡಿಯುವ, ಮೀನು ಹಿಡಿಯುವ ಮಂದಿ ಸೇತುವೆಯ ಮೇಲೆ ನಿಲ್ಲುವ ದುಸ್ಸಾಸಹಕ್ಕೆ ಇಳಿದರೆ ಅಪಾಯ ಕಟ್ಟಿಟ್ಟಬುತ್ತಿ. ತಕ್ಷಣ ಸಂಬಂದಪಟ್ಟವರು ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.