ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ➤ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್ ಬ್ಯಾನರು ತೆರವುಗೊಳಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹೋರ್ಡಿಂಗ್ಸ್/ದಿಕ್ಸೂಚಿ ಫಲಕ, ಕಟೌಟ್, ಪ್ಲೆಕ್ಸ್ ಬ್ಯಾನರ್, ಬಂಟಿಂಗ್ಸ್‍ಗಳನ್ನು ಅಳವಡಿಸಿರುವುದು ಕಾನೂನು ಬಾಹಿರವಾಗಿದ್ದು ನಗರದ ಸ್ವಚ್ಚತೆ ಮತ್ತು ಸೌಂದರ್ಯಕ್ಕೆ ಅಡ್ಡಿಯಾಗುತ್ತಿರುವುದು ಕಂಡುಬರುತ್ತಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳು, ಹಬ್ಬ ಹರಿದಿನಗಳು ಇರುವುದರಿಂದ ಅನೇಕ ಸಂಘಟಣೆಗಳು ಪ್ಲೆಕ್ಸ್ ಬ್ಯಾನರು/ ಕಟೌಟ್/ ಬಂಟಿಂಗ್ಸ್/ಪೋಸ್ಟರ್ಸ್‍ಗಳನ್ನು ಅಳವಡಿಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ನಗರದ ಸ್ವಚ್ಛತೆಯನ್ನು ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ಲೆಕ್ಸ್ ಬ್ಯಾನರು, ಕಟೌಟ್, ಪೋಸ್ಟರ್, ಬಂಟಿಂಗ್ಸ್‍ಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸದಂತೆ ಕೋರಲಾಗಿದೆ.

ಆದರೆ ಕೆಲವು ಕಾರ್ಯಕ್ರಮ ಸಂಘಟಕರು, ಸಿನೆಮಾ ಪ್ರಚಾರಕರು ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ, ಇನ್ನಿತರ ಉದ್ದೇಶಕ್ಕಾಗಿ ಪ್ರಚುರಪಡಿಸಲು ಕಟೌಟ್ ಇತ್ಯಾದಿಗಳನ್ನು ಹಾಕುತ್ತಿರುವುದು ಕಂಡು ಬಂದಿರುತ್ತದೆ. ಈ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್ ಬ್ಯಾನರು ಇತ್ಯಾದಿಗಳು ನಗರ ಸೌಂದರ್ಯವನ್ನು ಹಾಳು ಮಾಡುತ್ತಿದ್ದು ಭಾರಿ ಪ್ರಮಾಣದ ಘನತ್ಯಾಜವು ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ.

Also Read  2017ರ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ ➤ ಪ್ರಧಾನಿಗೆ ದೂರುನೀಡಿದ ವಿದ್ಯಾರ್ಥಿ

ನಗರವನ್ನು ಸ್ವಚ್ಚ ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಅಳವಡಿಸಲಾದ ಈ ಎಲ್ಲಾ ಅನಧಿಕೃತಗಳನ್ನು ಸಂಬಂಧಪಟ್ಟ ಸಂಸ್ಥೆ/ವ್ಯಕ್ತಿಗಳು ತಕ್ಷಣ ತೆರವುಗೊಳಿಸುವಂತೆ ಸೂಚಿಸಲಾಗಿದೆ. ‘ಪ್ಲೆಕ್ಸ್ ಮುಕ್ತ ಹಬ್ಬಗಳ ಆಚರಣೆ, ಸ್ವಚ್ಛ ಪರಿಸರ ನಮ್ಮೆಲರ ರಕ್ಷಣೆ.’ಇದಕ್ಕೆ ತಪ್ಪಿದಲ್ಲಿ ಪಾಲಿಕೆಯು ಮುಂದಿನ ದಿನಗಳಲ್ಲಿ ನಿರಂತರ ಕಾರ್ಯಚರಣೆಯನ್ನು ನಡೆಸಿ ಈ ಎಲಾ ಅನಧಿಕೃತಗಳನ್ನು ತೆರವುಗೊಳಿಸುವದರೊಂದಿಗೆ ಕರ್ನಾಟಕ ತೆರೆದ ಜಾಗ ತಡೆಕಾಯ್ದೆ 1981 ಮತ್ತು ಸರಕಾರದ ಅಧಿಸೂಚನೆ ಸಂಖ್ಯೆ ಅಪಜೀ 17/ಇಪಿಸಿ 2012ಬೆಂಗಳೂರು, ದಿನಾಂಕ 11-03-2016 ರನ್ವಯ ಸಂಬಂಧಪಟ್ಟವರಿಗೆ ದಂಡನೆಯನ್ನು ವಿಧಿಸಿ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಮಂಜುನಾಥ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳುವ ಈ8 ರಾಶಿಯವರಿಗೆ ಕಂಕಣಭಾಗ್ಯ ಧನಪ್ರಾಪ್ತಿ ಯೋಗ ಕಷ್ಟ ಕಾರ್ಯಗಳು ಪರಿಹಾರವಾಗುತ್ತದೆ

error: Content is protected !!
Scroll to Top