ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.ಸಣ್ಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣದಿಂದಾಗಿ ಅವರ ಜೊತೆಯಲ್ಲಿದ್ದು ಪಾಲನೆ ಪೋಷಣೆ ಮಾಡುವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಂದ ಡೆಂಗ್ಯೂ ಜಾಗೃತಿ ಮೂಡಿಸುವ ಕಾರ್ಯ ಸುಲಭವಾಗುತ್ತದೆ. ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಹೇಳಿದರು.


ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಂಗಳೂರು ನಗರದ ಅಂಗನವಾಡಿಗಳಿಗೆ ಸೊಳ್ಳೆ ಪರದೆಗಳ ವಿತರಣೆ ಮತ್ತು ಡೆಂಗ್ಯೂ ಬಗ್ಗೆ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಇವರು ಅಂಗನವಾಡಿ ಕಾರ್ಯಕರ್ತೆಯರಲ್ಲಿ ಧನಾತ್ಮಕ ಶಕ್ತಿ ತುಂಬಿರುವುದರಿಂದ ಅಂಗನವಾಡಿ ಕೇಂದ್ರ ಮತ್ತು ಪ್ರಾಥಾಮಿಕ ಶಾಲೆಯ ವಾತಾವರಣವು ಸಂತೋಷದಿಂದ ಇರುತ್ತದೆ. ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆ ಪ್ರದೇಶದ ಜನತೆಗೆ ಲಾರ್ವ ಬಗ್ಗೆ ಮಾಹಿತಿ ನೀಡಬೇಕು ಎಂದರು. ತುರ್ತು ಸೇವೆಗೆ 1077 ಈ ಸಹಾಯವಾಣಿಗೆ ಕರೆ ಮಾಡಿ ನೋಂದಣಿ ಮಾಡಬಹುದೆಂದು ತಿಳಿಸಿದರು.

Also Read  ಕಡಬ: ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ➤ಮಾನವೀಯತೆ ಮೆರೆದ ಪೊಲೀಸರು ಹಾಗೂ ಪತ್ರಕರ್ತರು

ಕಾರ್ಯಕ್ರಮದಲ್ಲಿ 12 ಅಂಗನವಾಡಿ ಕೇಂದ್ರಗಳಿಗೆ ಸಾಂಕೇತಿಕವಾಗಿ ಸೊಳ್ಳೆ ಪರದೆ ವಿತರಿಸಲಾಯಿತು. ಮಂಗಳೂರು ನಗರದಲ್ಲಿನ 225 ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಡಳಿತ, ರೆಡ್‍ಕ್ರಾಸ್ ಸಂಸ್ಥೆ, ಬ್ಯಾಂಕ್ ಆಫ್ ಬರೋಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 450 ಸೊಳ್ಳೆ ಪರದೆ ವಿತರಿಸಲಾಗುವುದು ಎಂದರು.ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಬ್ಯಾಂಕ್ ಆಫ್ ಬರೋಡದ ಮಹಾಪ್ರಬಂಧಕರಾದ ಎಂ.ಜೆ ನಾಗರಾಜ್ ಮಾತಾನಾಡಿ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಸಿ.ಎ ಶಾಂತರಾಮ್ ಶೆಟ್ಟಿ, ಡಾ. ರಾಜೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸುಂದರ್ ಪೂಜಾರಿ, ಮತ್ತಿತ್ತರು ಉಪಸ್ಥಿತರಿದ್ದರು.

Also Read  ಕಾರು- ಬೈಕ್ ನಡುವೆ ಢಿಕ್ಕಿ; ಸಹಸವಾರೆ ಮೃತ್ಯು

error: Content is protected !!
Scroll to Top