(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.6.ದ್ವಿಚಕ್ರ ವಾಹನಗಳಿಂದ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ನಗರದಲ್ಲಿಯೂ ಸಂಚಾರಿ ಪೊಲೀಸರು ಹೊಸ ಚಿಂತನೆಯೊಂದನ್ನು ನಡೆಸಿದೆ.
‘ಹೆಲ್ಮೆಟ್ ಧರಿಸಿ ಬಂದರಷ್ಟೇ ಬಂಕ್‌ಗಳಲ್ಲಿ ಪೆಟ್ರೋಲ್’ ಎನ್ನುವ ಒಂದು ಹೊಸ ನಿಯಮವು ದ್ವಿಚಕ್ರ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಆಂದೋಲನವನ್ನು ಪ್ರಾರಂಭಿಸುವುದಕ್ಕೆ ಸಂಚಾರಿ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿ ಅಪಘಾತಗಳಾಗಿ ಸಾವು-ನೋವು ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಬೆಂಗಳೂರಿನ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಸುರಕ್ಷತೆಯ ಉದ್ದೇಶದಿಂದ ಈಗಾಗಲೇ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಹಾಕಿದರೆ ಮಾತ್ರ ಪೆಟ್ರೋಲ್ ಎಂಬ ಜಾಗೃತಿ ಕಾರ್ಯವನ್ನು ಸಂಚಾರಿ ಪೊಲೀಸರು ಕೈಗೆತ್ತಿಗೊಂಡಿದ್ದಾರೆ.
ಅದಕ್ಕೆ ಉತ್ತಮ ಜನಮನ್ನಣೆ ಲಭಿಸಿದೆ.ಈಗ ಈ ನಿಯಮವನ್ನು ನಗರದಲ್ಲಿಯೂ ಅಳವಡಿಸಲು ಸಂಚಾರಿ ಪೊಲೀಸ್ ಇಲಾಖೆಯು ಚಿಂತಿಸುತ್ತಿದೆ.ಅದಕ್ಕೆ ಸಾಥ್ ನೀಡಲು ದ.ಕ. ಮತ್ತು ಉಡುಪಿ ಪೆಟ್ರೋಲ್ ಮಾಲಕರ ಸಂಘ ಕೂಡ ಉತ್ಸುಕದಲ್ಲಿದೆ.ಈಗಾಗಲೇ ಕೇರಳ, ಆಂಧ್ರಪ್ರದೇಶ ಸಹಿತ ಕೆಲವೊಂದು ರಾಜ್ಯಗಳಲ್ಲಿ ಮತ್ತು ಬೆಂಗಳೂರುನಲ್ಲಿ ಈ ನಿಯಮ ಜಾರಿಯಲ್ಲಿವೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಬೇಕು ಅಂದರೆ ಹೆಲ್ಮೆಟ್ ಇರಲೆಬೇಕು. ಹೆಲ್ಮೆಟ್ ಇಲ್ಲದಿದ್ದರೆ ಬಂಕ್ ಸಿಬಂದಿ ಪೆಟ್ರೋಲ್ ಹಾಕುವುದಿಲ್ಲ.