(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಕೊಂಬಾರು ಗ್ರಾ.ಪಂ, ಶೀರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೊಂಬಾರು ಆರೋಗ್ಯ ಉಪಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ. 5 ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಹರ್ಷಿತಾ ಡಿ.ಬಿ ಉಚಿತ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಗಳನ್ನು ನೀಡಿದರು. ಬಳಿಕ ಮಾತನಾಡಿದ ಅವರು ಆ.6 ರಂದು ಕೊಂಬಾರು ಗ್ರಾ.ಪಂ ವ್ಯಾಪ್ತಿಯ ಕೆಂಜಾಳ ,ಗುಂಡ್ಯ-ಪಿಲಿಕಜೆ ಶಾಲೆಯಲ್ಲಿ ಶಿಬಿರ ಮುಂದುವರಿಯಲಿದ್ದು, ಈ ಮಲೆಗಾಳದಲ್ಲಿ ಡೆಂಗ್ಯುನಂತಹ ಭಯಾನಕ ಜ್ವರಗಳು ಅತೀ ಹೆಚ್ಚುತ್ತಿದ್ದು, ಹೆಚ್ಚಿನ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಅಜಿತ್ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಚಿತ್ವವನ್ನು ಕಾಪಾಡುವುದರೊಂದಿಗೆ ಪಾತ್ರೆಯ ಹೊಂಡಗಳಲ್ಲಿ ಮಳೆನೀರು ನಿಲ್ಲದಂತೆ ಜಾಗೃತಿ ವಹಿಸಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನಾವೇ ಎಚ್ಚರಿಕೆ ವಹಿಸಬೇಕೆಂದರು. ಸದಸ್ಯರಾದ ಮಧುಸೂದನ್, ರುಕ್ಮಿಣಿಕುಶಾಲಪ್ಪ ಗೌಡ, ಕಿರಿಯ ಆರೋಗ್ಯ ಸಹಾಯಕಿ ಲಲಿತಾ, ಆಶಾ ಕಾರ್ಯಕರ್ತೆ ಶೋಭಾ ಚೇರು, ಗ್ರಾ.ಪಂ. ಸಿಬ್ಬಂಧಿಗಳು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ ಪ್ರಭಾರ ಅಬಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ, ವಂದಿಸಿದರು. ಆರೋಗ್ಯ ಕೇಂದ್ರ ಸಿಬ್ಬಂದಿ ಸಹಕರಿಸಿದರು.