ನೂಜಿಬೈಲ್: ನಾಗರ ಪಂಚಮಿ, ನಾಗ ತಂಬಿಲ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನಾಗಬನದಲ್ಲಿ ಸೋಮವಾರ ನಾಗರ ಪಂಚಮಿ ಪ್ರಯುಕ್ತ ನಾಗತಂಬಿಲ ಸೇವೆ ನಡೆಯಿತು.


ದೈವಸ್ಥಾನದ ಬಳಿಯಲ್ಲಿರುವ ನಾಗಬನದ ನಾಗಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಕ್ಷೀರಾಭಿಷೇಕ, ಸೀಯಾಳಭಿಷೇಕ ನಡೆದು, ಬಳಿಕ ನಾಗತಂಬಿಲ ಸೇವೆ ನಡೆಯಿತು. ಬಳಿಕ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಅರ್ಚಕರಾದ ಕೃಷ್ಣ ಹೆಬ್ಬಾರ್ ಹಾಗೂ ರವಿ ಹೆಬ್ಬಾರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ಊರ ಭಕ್ತರು ಉಪಸ್ಥಿತರಿದ್ದರು.

Also Read  ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ಪ್ರಭಾರ

error: Content is protected !!
Scroll to Top