ಜಿಲ್ಲಾ ಆಯುಷ್ ಇಲಾಖೆ ಹಾಗೂ ಆಯುಷ್ ಫೌಂಡೇಶನ್ ದ. ಕ ಇವರ ವತಿಯಿಂದ ➤ ಡೆಂಗಿ ನಿಯಂತ್ರಣ: ಆಯುಷ್ ವೈದ್ಯರಿಗೆ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಜಿಲ್ಲಾ ಆಯುಷ್ ಇಲಾಖೆ ಹಾಗೂ ಆಯುಷ್ ಫೌಂಡೇಶನ್ ದಕ್ಷಿಣ ಕನ್ನಡ ಇವರ ವತಿಯಿಂದ ಭಾನುವಾರ ನಗರದ ವೆನ್ಲಾಕ್ ಆಸ್ಪತ್ರೆಯ ಡಾ. ವಿವೇಕಾನಂದ ಪ್ರಭು ಸಭಾಂಗಣದಲ್ಲಿ ಆಯುಷ್ ಪದವೀಧರ ನೋಂದಾಯಿತ ವೈದ್ಯರಿಗಾಗಿ ಡೆಂಗಿ ರೋಗ ನಿಯಂತ್ರಣ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಮಾತನಾಡಿ, ವೈದ್ಯರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಜಿಲ್ಲೆಯಲ್ಲಿ ಡೆಂಗಿ ರೋಗಜನರಲ್ಲಿ ಹೆಚ್ಚಿನ ಆತಂಕ ಮೂಡಿಸುತ್ತಿದ್ದು, ಸಮರ್ಪಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ನಿಯಂತ್ರಣ ಸಾಧ್ಯ ಎಂದರು.ರೋಗ ಬಂದರೂ ಕೂಡಾ ಗಾಬರಿಗೊಳ್ಳದೆ ಮನೆಯಲ್ಲೇ ಇದ್ದು ಸಾಕಷ್ಟು ನೀರು ಕುಡಿಯುವ ಅಭ್ಯಾಸ, ವಿಶ್ರಾಂತಿ ಪಡೆಯುವುದು ಅಗತ್ಯವಾಗಿರುತ್ತದೆ. ಮಲೇರಿಯಾ ಇತ್ಯಾದಿ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು. ರೋಗ ಉಲ್ಬಣಗೊಂಡಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಾದರೆ ಉತ್ತಮ, ಅನಾವಶ್ಯಕವಾಗಿ ಕೇವಲ ಭಯದಿಂದ ಸಾಮಾನ್ಯ ಜ್ವರಕ್ಕೂ ದಾಖಲಾಗುವ ಅಗತ್ಯವಿಲ್ಲ ಎಂದರು.

Also Read  ಕಡಬ: ಅಧಿಕಾರಿಗಳ ಇಲಾಖಾ ವಾಹನಕ್ಕೆ ಹಾನಿ ಪ್ರಕರಣ      ➤  7 ಆರೋಪಿಗಳು ಅರೆಸ್ಟ್..!

ಡೆಂಗಿ ನಿಯಂತ್ರಣದ ಜನ ಜಾಗೃತಿ ಹಾಗೂ ಭರವಸೆ ಮೂಡಿಸುವ ಕಾರ್ಯದಲ್ಲಿ ಆಯುಷ್ ವೈದ್ಯರು ಸಹಕರಿಸುವಂತೆ ಕರೆಯಿತ್ತರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮದ್ ಇಕ್ಬಾಲ್ ಮಾತನಾಡಿ, ಡೆಂಗೀ ನಿಯಂತ್ರಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯುಷ್ ವೈದ್ಯರು ಮಹತ್ವದ ಪಾತ್ರವಹಿಸುವಂತೆ ತಿಳಿಸಿದರು. ಆಯುಷ್ ಇಲಾಖೆ ಹಲವು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು. ಆಯುಷ್ ಫೌಂಡೇಶನ್ ಅಧ್ಯಕ್ಷ ಡಾ.ಗೋಪಾಲಕೃಷ್ಣ ನಾಯಕ್ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ.ಪ್ರವೀಣ್ ಜೇಕೊಬ್, ಡಾ.ರವಿಗಣೇಶ್ ಮೋಗ್ರ, ಡಾ.ಕೇಶವ್ ಪಿ.ಕೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ್ ಶೆಟ್ಟಿ ವಂದಿಸಿದರು. ಡಾ.ಜ್ಯೋತಿ ಗಣೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Also Read  ಬೈಲೂರು-ಪಳ್ಳಿ ಅರಣ್ಯ ಪರಿಸರದಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ನಾಗರೀಕರು

 

error: Content is protected !!
Scroll to Top