ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ➤ ಮಕ್ಕಳ ಸೇವೆ: ಪ್ರಶಸ್ತಿ ಪುರಸ್ಕಾರ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಕರ್ನಾಟಕ ಸರ್ಕಾರವು ಪ್ರತಿ ವರ್ಷ ಮಕ್ಕಳ ದಿನಾಚರಣೆಯಂದು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ವ್ಯಕ್ತಿಗಳಿಗೆ ತಲಾ ರೂ. 25,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ. 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆಯಂದು ನೀಡಲಾಗುತ್ತದೆ.ಅರ್ಜಿ ಸಲ್ಲಿಸುವ ವ್ಯಕ್ತಿ/ಸಂಸ್ಥೆಗಳು ಅರ್ಜಿಯೊಂದಿಗೆ ದಾಖಲೆಗಳ ಪ್ರಸ್ತಾವನೆಯನ್ನು ಕನ್ನಡ ಭಾಷೆಯಲ್ಲಿ ದ್ವಿ-ಪ್ರತಿಯೊಂದಿಗೆ ಆಗಸ್ಟ್ 31ರೊಳಗೆ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ ಸಂಕೀರ್ಣ, ನೆಲಮಹಡಿ, ಕೊಟ್ಟಾರ, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2451254 ನ್ನು ಸಂಪರ್ಕಿಸಹುದು ಎಂದು ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಕುಂದಾಪುರ : ನಿಷೇಧವಿದ್ದರೂ ಬುಲ್‌ ಟ್ರಾಲ್‌ ಫಿಶಿಂಗ್, ಬೋಟ್‌ ವಶಕ್ಕೆ

error: Content is protected !!
Scroll to Top