ಮರ್ದಾಳ ಐತ್ತೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ , ಆಗಸ್ಟ್.5.ಮರ್ದಾಳ, 102 ನೆಕ್ಕಿಲಾಡಿ, ಐತ್ತೂರು, ಕೊಣಾಜೆ, ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಆ. 3ರಂದು ನಡೆಯಿತು.
ಸುಳ್ಯ ಶಾಸಕ ಎಸ್ ಅಂಗಾರ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿ ತತ್ವ ಸಿದ್ದಾಂತದ ಬಗ್ಗೆ ವಿವರಿಸಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು.

ಜಿಲ್ಲಾ ಶಕ್ತಿ ಕೇಂದ್ರದ ಸದಸ್ಯರಾದ ಕೃಷ್ಣಶೆಟ್ಟಿ ಕಡಬ, ಕಡಬ ತಾಲೂಕು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ, ಮರ್ದಾಳ ಬಿಜೆಪಿ ವಲಯ ಪ್ರಮುಖ್ ಉಮೇಶ್‍ಶೆಟ್ಟಿ ಸಾಯಿರಾಂ, ಮರ್ದಾಳ ಗ್ರಾ.ಪಂ ಸದಸ್ಯ ಹರೀಶ್ ಕೋಡಂದೂರು,ಕಡಬ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸೊಳಿಕೆ, ಬಿಜೆಪಿ ಮಹಿಳಾ ಮುಖ್ಯಸ್ಥೆ ಪುಲಸ್ತ್ಯ ರೈ, ಮರ್ದಾಳ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಲಲಿತಾ ಎಂ, ಜನಾರ್ದನ ಗೌಡ ಪುತ್ತಿಲ, ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ, ಮೊದಲಾದವರು ಉಪಸ್ಥಿತರಿದ್ದರು.

Also Read  ಅ.2: ಅಂಗನವಾಡಿ ಕೇಂದ್ರಗಳಲ್ಲಿ 'ಮಾತೃಪೂರ್ಣ ಯೋಜನೆ' ಜಾರಿ

error: Content is protected !!
Scroll to Top