ಕುಂತೂರು: ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಯಲ್ಲಿ ಡೆಂಗ್ಯು ರೋಗದ ಕುರಿತು ➤ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕುಂತೂರು, ಆಗಸ್ಟ್.5.ಇಲ್ಲಿನ ಪದವಿ ಹಾಗೂ ಬಿ.ಎಡ್. ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಜಾಗೃತಿ ಕಾರ್ಯಗಾರದಲ್ಲಿ ಇಲ್ಲಿನ ಬಿ.ಎಡ್. ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ರಾಜೇಶ್ ಉಪಧ್ಯಾಯ ಎಮ್. ಎನ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಡೆಂಗ್ಯು ರೋಗದ ಲಕ್ಷಣ, ಹರಡುವ ರೀತಿ, ಮತ್ತು ತಡೆಗಟ್ಟುವ ಸರಳ ವಿಧಾನಗಳನ್ನು ಕುರಿತಂತೆ ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಉಷಾ ಎಂ.ಎಲ್ ಅವರು ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಶ್ರೀ ಚಂದ್ರಶೇಖರ ಜಿ.ಎನ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮುನೀರಾ ಸ್ವಾಗತಿಸಿ, ಕುಮಾರಿ ಜೆಸಿಂತಾ ವಂದನಾರ್ಪಣೆಗೈದರು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಕುಮಾರಿ ತೃಪ್ತಿ ಶೆಟ್ಟಿ ಎಂ. ಅವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ನಂತರ ಎಲ್ಲಾ ವಿದ್ಯಾರ್ಥಿಗಳು ಜೊತೆಗೂಡಿ ಕಾಲೇಜಿನ ವಠಾರದಲ್ಲಿ ನಿಂತ ನೀರಿನ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದರೊಂದಿಗೆ ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.

Also Read  ➤ ಆಕಾಶವಾಣಿ ನಿರೂಪಕಿ ಸುಮಂಗಲಾ ಎಸ್ ಮುಮ್ಮಿಗಟ್ಟಿ ವಿಧಿವಶ

error: Content is protected !!
Scroll to Top