ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಪತ್ತೆ

(ನ್ಯೂಸ್ ಕಡಬ) newskadaba.com ನರಿಮೊಗರು, ಆಗಸ್ಟ್.5.ಸುಮಾರು 100 ವರ್ಷಗಳ ಇತಿಹಾಸ ಇರುವ ಈ ಮಸೀದಿ ಪ್ರಾರಂಭದಲ್ಲಿ ಹೆಂಚಿನ ಮಾಡನ್ನು ಹೊಂದಿತ್ತು. ಕಾಲಕ್ರಮೇಣ ಮಸೀದಿಯನ್ನು ನವೀಕರಣ ಮಾಡಲಾಗಿತ್ತು.

ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಎರಡು ದಿನಗಳ ಹಿಂದೆ ಕಾಮಗಾರಿ ನಡೆಸುವ ವೇಳೆ ಪತ್ತೆಯಾಗಿದೆ. ಸೇರಿನ ಹೊರಭಾಗದಲ್ಲಿ ಪೈಗಂಬರ್‌ ಸಮಕಾಲೀನ ಇಸ್ಲಾಂ ವಿದ್ವಾಂಸರ ಹೆಸರುಗಳನ್ನು ಕೆತ್ತಲಾಗಿದೆ. ಈ ಮಸೀದಿಯಲ್ಲಿ ಜಮಾತಿನ ಬಡವರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿತ್ತು. ಅಕ್ಕಿ ಅಳೆಯಲು ಹಿತ್ತಾಳೆಯ ಸೇರು ಬಳಕೆಯಲ್ಲಿತ್ತು.ಈ ವಿಚಾರವಾಗಿ ಜಮಾತ್‌ ಮುಖಂಡರಲ್ಲಿ ಕೇಳಿದಾಗ ಹಿಂದೆ ಮಸೀದಿಯಲ್ಲಿ ಅಕ್ಕಿ ವಿತರಿಸಲು ಬಳಕೆಯಲ್ಲಿದ್ದ ಹಳೆಯ ಕಾಲದ ಸೇರು ಮಸೀದಿ ನವೀಕರಣದ ವೇಳೆ ಮಣ್ಣಿನಡಿಯಲ್ಲಿ ಹೂತು ಹೋಗಿರಬಹುದು. ಸುಮಾರು 60 ವರ್ಷಗಳಷ್ಟು ಹಳೆಯ ಸೇರು ಇದಾಗಿರಬಹುದು ಅಷ್ಟೇ ಎನ್ನುವ ಮಾಹಿತಿ ನೀಡಿದ್ದಾರೆ.

Also Read  ಉಪ್ಪಿನಂಗಡಿ: ಹಿಜಾಬ್ ವಿಚಾರದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತನಿಗೆ ದಿಗ್ಬಂಧನ ಆರೋಪ ➤ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಡಬ ತಾಲೂಕು ಪತ್ರಕರ್ತರ ಸಂಘದಿಂದ ಮನವಿ

 

error: Content is protected !!
Scroll to Top