ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ➤ ಉಚಿತ ಆಯುಷ್ ಚಿಕಿತ್ಸಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್, ವೆನ್ಲಾಕ್ ಆಯುಷ್ ಇಂಟಿಗ್ರೇಟೆಡ್ ಆಸ್ಪತ್ರೆ, ರಾಷ್ಟ್ರೀಯ ಆಯುಷ್ ಅಭಿಯಾನ ವತಿಯಿಂದ ಒಡಿಯೂರು ಶ್ರೀಗಳರವರ ಜನ್ಮದಿನೋತ್ಸವ ಸಮಿತಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇವರ ಸಹಯೋಗದೊಂದಿಗೆ, ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.

ಜುಲೈ 29 ರಂದು ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾನಾಪುರ ಒಡಿಯೂರು ಬಂಟ್ವಾಳ ತಾ, ಇಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು. ಚಿಕಿತ್ಸಾ ಶಿಬಿರದಲ್ಲಿ ಡಾ. ಮಹಮದ್ ನೂರುಲ್ಲಾ, ಡಾ. ಶೋಭಾರಾಣಿ.ಎನ್.ಎಸ್, ಡಾ. ಸಹನಾ ಪಾಂಡುರಂಗ, ಡಾ. ದಿವ್ಯರಾಜೇ ಗೌಡ, ಡಾ. ಶ್ರೀದೇವಿ, ಡಾ. ಸ್ವಾತಿ, ಡಾ. ಶ್ರದ್ಧಾ ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿಗಳಾದ ಶಭ್ನಮ್, ನಿತೇಶ್ ಇವರು ಭಾಗವಹಿಸಿದರು. ಆಯುರ್ವೇದ, ಹೋಮಿಯೋಪತಿ, ಯುನಾನಿ ಔಷಧಿಗಳನ್ನು ನೀಡಿ ಚಿಕಿತ್ಸಾ ಶಿಬಿರವು ಯಶಸ್ವಿಯಾಯಿತು ಎಂದು ಜಿಲ್ಲಾ ಆಯುಷ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.

Also Read  BMTC ಬಸ್ ನಲ್ಲಿ ದಿಡೀರ್ ಕಾಣಿಸಿಕೊಂಡ ಬೆಂಕಿ ! ➤ ನಿದ್ರೆಯಲ್ಲಿದ್ದ ಕಂಡೆಕ್ಟರ್ ಸಜೀವ ದಹನ

error: Content is protected !!
Scroll to Top