ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ➤ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲಸೌಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.5.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಿರುಸಾಲ ಗರಿಷ್ಠರೂ 2 ಲಕ್ಷ ಉಳಿತಾಯ ಹೊಂದಿರುವ ಅರ್ಹ ಸ್ತ್ರೀಶಕ್ತಿ ಗುಂಪುಗಳಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ 2 ಲಕ್ಷ ಬಡ್ಡಿರಹಿತ ಸಾಲವನ್ನು ನೀಡಲಾಗುವುದು.

ಆಸಕ್ತಿ ಇರುವ ಸ್ತ್ರೀಶಕ್ತಿ ಗುಂಪಿನವರು ಅರ್ಜಿಯನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದುಕೊಂಡು ಆಗಸ್ಟ್ 10 ರೊಳಗಾಗಿ ತ್ರಿ-ಪ್ರತಿಯಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳ ದೂರವಾಣಿ ಸಂಖ್ಯೆ: ಮಂಗಳೂರು ನಗರ 0824-2432809, ಮಂಗಳೂರು ಗ್ರಾಮಾಂತರ 0824-2263199, ಬಂಟ್ವಾಳ 08255-232465, ವಿಟ್ಲ 08255-238080, ಪುತ್ತೂರು 08251-230388, ಸುಳ್ಯ 08257-230239, ಬೆಳ್ತಂಗಡಿ 08256-232134 ನ್ನು ಸಂಪರ್ಕಿಸಬೇಕು ಎಂದು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಆಸ್ಟ್ರೇಲಿಯಾ: ಅಕ್ಟೋಬರ್ ತಿಂಗಳನ್ನು “ಹಿಂದೂ ಪರಂಪರೆ ಮಾಸ” ಎಂದು ಘೋಷಿಸಿದ ಆಸ್ಟ್ರೆಲಿಯಾ ಸಂಸದ

error: Content is protected !!
Scroll to Top