ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಸಾವು



(ನ್ಯೂಸ್ ಕಡಬ) newskadaba.com ವಿಜಯಾಪುರ, ಆಗಸ್ಟ್.3.ಶಾಲಾ ಬಸ್ಸಿನಲ್ಲಿ ಬಂದ ಸೋದರಿಯರನ್ನು ಇಳಿಸಿಕೊಳ್ಳಲು ತಂದೆಯ ಜತೆಗೆ ತೆರಳಿದ್ದ ಬಾಲಕಿ ಮೇಲೆ ಶಾಲಾ ಬಸ್‌ ಹರಿದಿದೆ. ಪರಿಣಾಮವಾಗಿ ಸ್ಥಳದಲ್ಲೇ ಭಕ್ತಿ ಗಿರಿಮಲ ನಿಡೋಣಿ(3) ಎಂಬಾಕೆ ಮೃತಪಟ್ಟಿದ್ದಾಳೆ.





ಅಕ್ಕ ಇಳಿದು ಬಂದಾಗ ಹಿಂದಿನಿಂದ ಬಾಲಕಿ ಬರುತ್ತಿದ್ದ ವೇಳೆ ಬಾಲಕಿಯನ್ನು ಗಮನಿಸದೆ ಚಾಲಕ ಬಸ್‌ ಚಲಾಯಿಸಿದ್ದಾನೆ. ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಈ ಘಟನೆ ವಿಜಯಪುರ ನಗರದ ಕೆಐಡಿಬಿ ಕೈಗಾರಿಕೆ ಪ್ರದೇಶದಲ್ಲಿ ನಡೆದಿದೆ. ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಜಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top