ಮನೆಯ ವಿದ್ಯುತ್ ಖರ್ಚನ್ನು ಆದಷ್ಟು ಕಡಿಮೆಗೊಳಿಸಲು ➤ ಇಲ್ಲಿದೆ ಸುಲಭ ಉಪಾಯ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.3.ಮನೆಯ ವಿದ್ಯುತ್‌ ಖರ್ಚನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಮಾತ್ರವಲ್ಲ ದಿನೇ ದಿನೇ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವುದರಿಂದ ನಾವು ಕೂಡಾ ಒಂದಷ್ಟು ಉಳಿತಾಯ ಮಾಡುವತ್ತ ಗಮನಹರಿಸುವುದು ಉತ್ತಮ.

ನಾವು ಮನಸ್ಸು ಮಾಡಿದರೆ ಈ ಕೆಲಸ ಕಷ್ಟವೇನಲ್ಲ. ಅದಕ್ಕಾಗಿ ಕೆಲವೊಂದು ಸುಲಭ ಹಾಗೂ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.ವಿದ್ಯುತ್‌ ಖರ್ಚನ್ನು ಉಳಿಸುವ ಅತ್ಯುತ್ತಮ ಮಾರ್ಗ ಎಂದರೆ ಮನೆಗೆ ಸೋಲಾರ್‌ ಅಳವಡಿಸುವುದು. ಆರಂಭದಲ್ಲಿ ಅಳವಡಿಕೆ ಖರ್ಚು ಬಿಟ್ಟರೆ ಮತ್ತೆ ಹೆಚ್ಚಿನ ವೆಚ್ಚ ಮಾಡಬೇಕಾಗಿಲ್ಲ ಎನ್ನುವುದೇ ಇದರ ದೊಡ್ಡ ವಿಶೇಷತೆ. ಸಾಮಾನ್ಯವಾಗಿ ವರ್ಷದ 300 ದಿನವೂ ಸೂರ್ಯಪ್ರಕಾಶ ಲಭ್ಯವಿರುತ್ತದೆ.

ಹೀಗಾಗಿ ಬೆಳಕಿನ ಮೂಲದ ಬಗ್ಗೆ ಚಿಂತೆ ಇಲ್ಲ. ಸೋಲಾರ್‌ ಪ್ಯಾನಲ್ಗಳು ಬೆಳಕನ್ನು ಚೈತನ್ಯವಾಗಿ ಪರಿವರ್ತಿಸಿ ನಮಗೆ ಒದಗಿಸುತ್ತವೆ. ಮನೆಯ ಛಾವಣಿಗೆ ಸೋಲಾರ್‌ ಪ್ಯಾನಲ್ ಅಳವಡಿಸಿದರೆ ಸಾಕು. ಇನ್ನೊಂದು ವಿಶೇಷತೆ ಎಂದರೆ ಪ್ಯಾನಲ್ ಅಳವಡಿಸಲು ಆಗಬಹುದಾದ ಖರ್ಚನ್ನು ವಿದ್ಯುತ್‌ ಬಿಲ್ನಿಂದ ಉಳಿತಾಯ ಮಾಡಿ ಕೆಲವೇ ವರ್ಷಗಳಲ್ಲಿ ಸರಿದೂಗಿಸಬಹುದು. ಹೀಗಾಗಿ ಸೋಲಾರ್‌ ಅಳವಡಿಕೆಯತ್ತ ನಿಮ್ಮ ಚಿತ್ತ ಹರಿಸಬಹುದು.

error: Content is protected !!

Join the Group

Join WhatsApp Group