ಮರ್ದಾಳ: ಜೆ.ಸಿ.ಐ ವೃತ್ತಕ್ಕೆ ರಿಪ್ಲೆಕ್ಟರ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.3. ಮರ್ದಾಳ ಆ.02. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಜಂಕ್ಷನ್‍ನಲ್ಲಿ ಜೆ.ಸಿ.ಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ ಮರ್ದಾಳ ಗ್ರಾ.ಪಂ. ಸಹಕಾರದೊಂದಿಗೆ ನಿರ್ಮಿಸಲಾಗಿದ್ದ ಜೇಸಿ ವೃತ್ತಕ್ಕೆ ಆ.2 ರಂದು ಪಿಡಬ್ಲೂಡಿ ಇಲಾಖೆಯಿಂದ ರಿಫ್ಲೆಕ್ಟರ್ ಅಳವಡಿಸಲಾಯಿತು.

ಧರ್ಮಸ್ಥಳದಿಂದ ಹಾಗೂ ಉಪ್ಪಿನಂಗಡಿ, ಕಡಬ ಕಡೆಯಿಂದ ಬರುತ್ತಿರುವ ವಾಹನಗಳಿಗೆ ರಾತ್ರಿ ಹೊತ್ತಲ್ಲಿ ಸರ್ಕಲ್ (ವೃತ್ತ) ಗಮನಕ್ಕೆ ಬಾರದೆ ಅಪಘಾತಗಳು ಸಂಭವಿಸುವ ಬಗ್ಗೆ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಯವರು ಜಂಕ್ಷನ್ ನಲ್ಲಿ ರಿಫ್ಲೆಕ್ಟರ್ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಪಿಡಬ್ಯೂಡಿ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಮರ್ದಾಳ ಜೆ.ಸಿ.ಐ. ವೃತ್ತದಲ್ಲಿ ರಿಪ್ಲೆಕ್ಟರ್ ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

Also Read  ಆದಾಯ ತೆರಿಗೆ ಇಲಾಖೆ ಮಂಗಳೂರು ಇದರ ವತಿಯಿಂದ ➤ ಆದಾಯ ತೆರಿಗೆ ದಿನಾಚರಣೆ

error: Content is protected !!
Scroll to Top