ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲಿ ➤ ಸರಸ್ವತೀ ವಿದ್ಯಾಲಯದ ತಂಡ ಪ್ರಾಂತ ಮಟ್ಟಕ್ಕೆ ಆಯ್ಕೆ..

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.3.ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸರಸ್ವತೀ ವಿದ್ಯಾಲಯ ಕಡಬ ಇದರ 17ರ ವಯೋಮಾನದ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಾಂತ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಮುಂಡಾಜೆ ಪದವಿಪೂರ್ವ ಕಾಲೇಜು, ಮುಂಡಾಜೆಯಲ್ಲಿ ನಡೆಯಲಿರುವ ಪ್ರಾಂತ ಮಟ್ಟಕ್ಕೆ ಆಯ್ಕೆಗೊಂಡಿತು. ದೈಹಿಕ ಶಿಕ್ಷಕರಾದ ಲಕ್ಷ್ಮೀಶ ಗೌಡ, ಸ್ಥಳೀಯ ಕಬಡ್ಡಿ ತರಬೇತುದಾರ ಶೇಖರ ಪೂಜಾರಿ, ಶಿಕ್ಷಕರಾದ ಶಿವಪ್ರಸಾದ್ ಮತ್ತು ನಾಗೇಶ್ ಕ್ರೀಡಾಪಟುಗಳಿಗೆ ತರಬೇತಿ ನೀಡಿರುತ್ತಾರೆ. ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕವೃಂದ ಸಹಕರಿಸಿದ್ದಾರೆ.

Also Read  ಮಂಗಳೂರು: ವೀಸಾ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ..!!   ➤ ಆರೋಪಿ ಸಿಸಿಬಿ ವಶಕ್ಕೆ!  

error: Content is protected !!
Scroll to Top