(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.3.2019-20ನೇ ಸಾಲಿನ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‍ಪಿಸಿ) ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಶಾಲೆಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಸ್ಟ್ 3 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಕೇಂದ್ರೀಯ ವಿದ್ಯಾಲಯ ನಂ-2 ಎಕ್ಕೂರು ಇಲ್ಲಿ ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಜಿಲ್ಲೆಯಲ್ಲಿ ಏಕಕಾಲದಲ್ಲಿ ಉದ್ಘಾಟನೆಗೊಳ್ಳಲಿವೆ.
ಆ ಶಾಲೆಗಳ ವಿವರ ಇಂತಿವೆ: ಕೇಂದ್ರೀಯ ವಿದ್ಯಾಲಯ ಬೈಕಂಪಾಡಿ ಮಂಗಳೂರು, ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು ತಾಲೂಕು, ಸರ್ಕಾರಿ ಪ್ರೌಢಶಾಲೆ ಮಂಚಿ ಕೊಲ್ನಾಡು ಬಂಟ್ವಾಳ ತಾಲೂಕು, ಕೇಂದ್ರೀಯ ವಿದ್ಯಾಲಯ ನಂ-2 ಮಂಗಳೂರು, ಸರಕಾರಿ ಪ್ರೌಢ ಶಾಲೆ ಎಲಿಮಲೆ ಸುಳ್ಯ ತಾಲೂಕು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಸುಳ್ಯ, ಸರಕಾರಿ ಪದವಿಪೂರ್ವ ಕಾಲೇಜು ಸವಣೂರು, ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಸುಳ್ಯ ತಾಲೂಕು, ಸರಕಾರಿ ಪದವಿಪೂರ್ವ ಕಾಲೇಜು ಕುರ್ನಾಡು ಬಂಟ್ವಾಳ, ಸರಕಾರಿ ಪ್ರೌಡ ಶಾಲಿ ಅಳಿಯೂರು ಮೂಡಬಿದ್ರೆ, ಇಲ್ಲಿ ಸ್ಟೂಡೆಂಟ್ ಕೆಡೆಟ್ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದು ಕಮಾಂಡೆಂಟ್ ಜನಾರ್ಧನ್ ಆರ್, ಕೆ ಎಸ್ ಆರ್ ಪಿ ಇವರ ಪ್ರಕಟನೆ ತಿಳಿಸಿದೆ.