ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮಗಳ ಅನುಷ್ಠಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.2.ಕರ್ನಾಟಕ ಸರ್ಕಾರದ 2019-20ನೇ ಸಾಲಿನ ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ದ.ಕ ಜಿಲ್ಲೆಗೆ ಗುರಿ ನಿಗದಿಪಡಿಸಲಾಗಿದೆ.


ಈ ಯೋಜನೆಯನ್ನು ಬೇಡಿಕೆ ಆಧಾರಿತ ಯೋಜನೆಯಾಗಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಮಹಿಳೆಯರಿಗೆ ಹೈನುಗಾರಿಕೆ-30, 3ಕುರಿ /ಮೇಕೆ-94 ಹಾಗೂ ಮತ್ತು ಅನುಸೂಚಿ ಜಾತಿಗಳ ಉಪಯೋಜನೆ, ಬುಡಕಟ್ಟು ಉಪಯೋಜನೆಯಡಿ ಹೈನುಗಾರಿಕೆ-9, 3ಕುರಿ/ಮೇಕೆ-10, ಮತ್ತು ಹಂದಿ ಘಟಕ-4 ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಹೈನುಗಾರಿಕೆ ಘಟಕ ವೆಚ್ಚ (60000) ಘಟಕ ವೆಚ್ಚದ ಶೇ.90%, ಸಹಾಯಧನ ಹಾಗೂ 3ಕುರಿ/ಮೇಕೆ ಘಟಕ ವೆಚ್ಚ (15000) ಘಟಕ ವೆಚ್ಚದ ಶೇ 90%, ಕುರಿ/ಮೇಕೆ (10+1) ಘಟಕ ವೆಚ್ಚ (70000) ಘಟಕ ವೆಚ್ಚದ ಶೇ.90%, ಸಹಾಯಧನವನ್ನು ಪಾವತಿಸಲಾಗುವುದು, ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ, ಭೂ ಹಿಡುವಳಿ ರಹಿತ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಲಾಗುವುದು, ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಇಚ್ಚಿಸುವ ಫಲಾನುಭವಿಗಳು ಯೋಜನೆಯ ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ನಮೂನೆಗಾಗಿ ಆಯಾ ತಾಲ್ಲೂಕಿನ ಪಶುಸಂಗೋಪನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರುಗಳು/ ಸ್ಥಳೀಯ ಪಶುವೈದ್ಯಾಧಿಕಾರಿಗಳನ್ನು ಭೇಟಿ ಮಾಡಬೇಕು, ಈ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೆ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

Also Read  ನೀರಾನೆ ಬಾಯಿಯಿಂದ ಬದುಕಿಬಂದ ಪುಟ್ಟ ಪೋರ.. !

ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಎಲ್ಲಾ ಪೂರಕ ದಾಖಲೆಗಳೊಂದಿಗೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಸುಳ್ಯ, ಕಡಬ ಮತ್ತು ಮೂಡಬಿದ್ರೆ ತಾಲ್ಲೂಕಿನ ಸಹಾಯಕ ನಿರ್ದೇಶಕರುಗಳು ಅಥವಾ ಸ್ಥಳೀಯ ಪಶುವೈದ್ಯಾಧಿಕಾರಿಗಳಿಗೆ ಆಗಸ್ಟ್ 31 ರ ಒಳಗಾಗಿ ಸಲ್ಲಿಸಬೇಕು. ಜಿಲ್ಲೆಯ ಎಲ್ಲಾ ಆಸಕ್ತ ರೈತರು ನಿರುದ್ಯೋಗಿ ಯುವಕ ಯುವತಿಯರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: KSRTC ಬಸ್‌ ಗೆ ಢಿಕ್ಕಿಯಾದ ಆಲ್ಟೋ ಕಾರು ➤ ತಪ್ಪಿದ ಅನಾಹುತ

error: Content is protected !!
Scroll to Top